
ಭಟ್ಕಳ:- ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಮಾವಳ್ಳಿ ಹೋಬಳಿಯ ಶಿರಾಲಿ 1 ಮಣ್ಣಹೊಂಡದಲ್ಲಿರುವ ನಾಮಧಾರಿ ಸಭಾಭವನದಲ್ಲಿ ಜರುಗಿತು. ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮುಂದಿನ ತಿಂಗಳೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಇದು ಕೊನೆಯ ಕಾರ್ಯಕ್ರಮವಾಗಬಹುದು ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದು ಪೋಷಣ ಅಭಿಯಾನ ಕಾರ್ಯಕ್ರಮ, ಸೀಮಂತ ಕಾರ್ಯಕ್ರಮ ಇಂತಹ ಕಾರ್ಯಕ್ರಮಕ್ಕೊಂದು ಮೆರಗು ನೀಡಿದೆ ಎಂದರು. ಜನತೆ ತಮ್ಮ ಯಾವುದೇ ಸಮಸ್ಯೆ ಇದ್ದರೂ ಸಹ ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ತಿಳಿಸಿ ಅದಕ್ಕೆ ಪರಿಹಾರ ಕೊಂಡುಕೊಳ್ಳುವAತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಎ. ತಿಪ್ಪೇಸ್ವಾಮಿ ಅವರು ಈ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಕೂಡಾ ಸಾಧ್ಯವಾದಷ್ಟು ವಿಲೇವಾರಿಗೆ ತರುತ್ತೇವೆ. ಯಾವ್ಯಾವ ಇಲಾಖೆಯ ಅರ್ಜಿ ಬಂದಿದೆ ಅವುಗಳಿಂದ ಅದಕ್ಕೆ ಪರಿಹಾರ ಪಡೆದುಕೊಳ್ಳಲಾವುದು. ಒಂದು ವೇಳೆ ಸಾಧ್ಯವಾಗದೇ ಇರುವ ಕಾರ್ಯವಾದಲ್ಲಿ ಅದಕ್ಕೆ ಆಯಾಯ ಇಲಾಖೆಯಿಂದ ಹಿಂಬರಹ ಕೊಡಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಪೂರ್ವ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಗಿಡವನ್ನು ನೆಟ್ಟು ನೀರೆರೆದರು. ಮಾತೃವಂದನೆ ಕಾರ್ಯಕ್ರಮದಲ್ಲಿ ಇಬ್ಬರು ಗರ್ಭಿಣಿಯರಿಗೆ ಉಡಿತುಂಬುವುದರ ಮೂಲಕ ಗೌರವಿಸಲಾಯಿತು. .
ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಸ್ವಾಗತಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು.
ವೇದಿಕೆಯಲ್ಲಿ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಹೆಚ್.ಕೆ. ಬಿಳಗಿ, ಕೃಷಿ ಅಧಿಕಾರಿ ಎ.ಬಿ. ಇಟ್ನಾಳ್, ಶಿಕ್ಷಣ ಇಲಾಖೆಯಿಂದ ರವೀಂದ್ರ ನಾಯ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಶಂಕರ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ನಂತರ ಸಹಾಯಕ ಆಯುಕ್ತೆ ಹಾಗೂ ತಹಸೀಲ್ದಾರ್ ಮುತ್ತು ಇತರ ಅಧಿಕಾರಿಗಳು ಜನರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಅಳ್ವೇಕೋಡಿಯ ಎರಡು ಅಂಗನವಾಡಿ ಕೇಂದ್ರಗಳು, ಆಲ್ವೇಕೋಡಿ ಹಿರಿಯ ಪ್ರಾಥಮಿಕ ಶಾಲೆ, ಬಂಡಿಮನೆ ಹೊಳೆಗೆ ಹೂಳೆತ್ತುವ ಕುರಿತು ಪರಿಶೀಲನೆ, ಕಂಠದಹಿತ್ಲು ಹೊಳೆ ಕಂಠದ ಸಮಸ್ಯೆಯನ್ನು ಪರಿಶೀಲಿಸಲಾಯಿತು.
ಕಾರ್ಯಕ್ರಮದಲ್ಲಿ ಒಟ್ಟೂ 56 ಅರ್ಜಿಗಳು ಬಂದಿದ್ದು ಅವುಗಳಲ್ಲಿ ಬೇರೆ ಬೇರೆ ಇಲಾಖೆಯ ಅರ್ಜಿಗಳನ್ನು ಆಯಾಯ ಇಲಾಖೆಗಳಿಗೆ ವಿಲೇವಾರಿ ಮಾಡಲು ಕಳುಹಿಸಲಾಯಿತು. ಪಿಂಚಣಿಗಾಗಿ ಸಲ್ಲಿಕೆಯಾಗಿದ್ದ 28 ಅರ್ಜಿಗಳಲ್ಲಿ 20 ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಿ ನೀಡಲಾಯಿತು. ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿ ಹೇಮಾ ಹಾಗೂ ಕಂದಾಯ ಸಿಬ್ಬಂದಿಗಳು ಸಹಕರಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ