April 30, 2024

Bhavana Tv

Its Your Channel

ದಾಂಡೇಲಿ-ಜೋಯಿಡಾದ ಒಡನಾಡಿ ಬಳಗದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವ ಬುಧೋ ವೇಳಿಪರವರಿಗೆ ಸನ್ಮಾನ

ದಾಂಡೇಲಿ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ ಜೋಯಿಡಾದ ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ಬುಧೋ ವೇಳಿಪರನ್ನು ದಾಂಡೇಲಿ-ಜೋಯಿಡಾದ ಒಡನಾಡಿ ಬಳಗದವರು ಅವರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಹಾದೇವ ವೇಳಿಪ ಹಾಗೂ ಅವರ ಕುಟುಂಬದವರ ಜೊತೆಗಿನ ಹಲವು ವರ್ಷಗಳ ಒಡನಾಟವನ್ನು ನೆನಪಿಸಿಕೊಂಡು ಮಾತನಾಡಿದ ಒಡನಾಡಿ ಅಧ್ಯಕ್ಷ, ಪತ್ರಕರ್ತ ಬಿ.ಎನ್. ವಾಸರೆಯವರು ಮಹಾದೇವ ವೇಳಿಪರಗೆ ಪರಿಸರ ಮತ್ತು ಜನಪದದ ಸೇವೆಗೆ ಈ ಕೆಲ ವರ್ಷಗಳ ಹಿಂದೆಯೇ ಬರಬೇಕಿದ್ದ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿಯಾದರೂ ಬಂದಿರುವುದು ಸಂತಸ ತಂದಿದೆ.
ಇದು ಕಾಡ ಹಕ್ಕಿಯನ್ನು ಹುಡುಕಿಕೊಂಡು ಬಂದAತಹ ಅತ್ಯಂತ ಸ್ವಾಗತಾರ್ಹ ಗೌರವವಾಗಿದೆ. ಅವರ ಪರಿಸರ ಪ್ರೀತಿ, ಜಾನಪದ ಸಾಹಿತ್ಯ ಮುಂದಿನ ಪೀಳಿಗೆಗೆ ವಿಸ್ತರಿಸುವಂತಾಗಬೇಕು. ಕಾಡಿನೊಳಗೆ ತೆರೆಯ ಮರೆಯಲಿದ್ದ ಮಹಾದೇವ ವೇಳಿಪರನ್ನು ಹೊರ ಜಗತ್ತಿಗೆ ಪರಿಚಯಿಸುವಲ್ಲಿ ಡಾ. ವಿಠ್ಠಲ ಭಂಡಾರಿ, ಯಮುನಾ ಗಾಂವಕರ, ಅಕ್ಷತಾ ಕೃಷ್ಣಮೂರ್ತಿ ಹಾಗೂ ಸ್ಥಳೀಯ ಪತ್ರಕರ್ತರು ಸಾಕಷ್ಟು ಪ್ರಯತ್ನಿಸಿದ್ದು, ಅವರೆಲ್ಲರ ಶ್ರಮಕ್ಕೆ ಇಂದು ಫಲ ಸಿಗುವಂತಾಗಿದೆ. ಕುಣಬಿ ಸಮುದಾಯ ಹಾಗೂ ಜೋಯಿಡಾ ತಾಲೂಕಿಗೆ ಬಂದAತಹ ಮೊಟ್ಟ ಮೊದಲ ರಾಜ್ಯೋತ್ಸವ ಪ್ರಶಸ್ತಿ ಇದಾಗಿದ್ದು, ಕಲಾವಿದ ಮಹಾದೇವ ವೇಳಿಪರ ಹೆಸರು ಜೋಯಿಡಾಲ್ಲಿ ಶಾಶ್ವತವಾಗಿತಿರುವಂತಹ ಕೆಲಸವೊಂದು ಆಗಬೇಕು. ಅದಕ್ಕೆ ಆಳುವವರು ಮನಸ್ಸು ಮಾಡಬೇಕು ಎಂದರು.
ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಬುಧೋ ವೇಳಿಪರ ಪರಿಸರ ಕಾಳಜಿ ಹಾಗೂ ಜನಪದ ಜ್ಞಾನದ ಬಗ್ಗೆ ಮಾತನಾಡಿ ಅವರೊಳಗಿದ್ದ ಅಪಾರ ಅನುಭಗಳನ್ನು ಹಂಚಿಕೊoಡರು. ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಬರುವಂತಾಗಲೆAದರು. ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ತಸ್ಟಿನ ಆಡಳಿತಾಧಿಕಾರಿ ಪ್ರಕಾಶ ಪ್ರಭುರವರು ಮಹಾದೇವ ವೇಳಿಪರ ಬದುಕನ್ನು ದಾಖಲೀಕರಿಸುವ ಕೆಲಸವಾಗಬೇಕೆಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೋಯಿಡಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ, ಯುವಜನ ಸಂಘಟನೆಯ ಕಾರ್ಯದರ್ಶಿ ಡಿ. ಸ್ಯಾಮಸನ್, ಕುಣಬಿ ಸಮಾಜದ ಮಾಜಿ ಅಧ್ಯಕ್ಷ ಜಯಾನಂದ ಡೇರೇಕರ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದಾಂಡೇಲಿಯ ಹಿರಿಯ ಸಾಹಿತಿ ಮುರ್ತುಜಾ ಹುಸೆನ
ಆನೆಹೊಸೂರ, ಕೀರ್ತಿ ಗಾಂವಕರ, ಮೋಹನ ಹಲವಾಯಿ, ರೋಷನ್ ನೇತ್ರಾವಳಿ, ಪತ್ರಕರ್ತರಾದ ಗಿರೀಶ್ ಭಾಗ್ವತ್, ಪ್ರವೀಣಕುಮಾರ ಸಲಾಖೆ, ಲತೇಶ ಚಾಟ್ಲಾ, ಸಂಜೀವಿನಿ ಟ್ರಸ್ಟಿನ ಉಮೇಶ ಹುಡಸಾ, ಊರಿನ ಬುದವಂತ ಕಮಲಾಕರ ವೇಳಿಪ, ರೈತ ಸಂಘದ ಪ್ರೇಮಾನಂದ ವೇಳಿಪ, ರಾಜೇಶ ಗಾವಡಾ, ದೇವದಾಸ ವೇಳಿಪ ಕಾರ್ಟೊಳಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇಶಪಾಂಡೆ ಟ್ರಸ್ಟಿನಿಂದ ಪ್ರಕಾಶ ಪ್ರಭು ರೈತ ಸಂಘದಿoದ ರಾಜೇಶ ಗಾವಡಾ, ಪ್ರೇಮಾನಂದ ವೇಳಿಪ ಹಾಗೂ ಊರ ಗ್ರಾಮಸ್ಥರು ಮಹಾದೇವ ವೇಳಿಪರನ್ನು ಸನ್ಮಾನಿಸಿ ಗೌರವಿಸಿದರು.

error: