May 3, 2024

Bhavana Tv

Its Your Channel

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ೨೦೨೦-೨೧ನೇ ಸಾಲಿನ ಸರ್ವ ಸಾಮಾನ್ಯ ಸಭೆ

ಹೊನ್ನಾವರ:ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ೨೦೨೦-೨೧ನೇ ಸಾಲಿನ ಸರ್ವ ಸಾಮಾನ್ಯ ಸಭೆಯು ಪಟ್ಟಣದ ಲಯನ್ಸ ಭವನದಲ್ಲಿ ನಡೆಯಿತು

ಸಭೆಯಲ್ಲಿ ನಿರ್ದೆಶಕರಾದ ಜಿ. ಆರ್ ಹೆಗಡೆಯವರು ಪ್ರಾಸ್ಥಾವಿಕವಾಗಿ ಮಾತನಾಡಿ ಕಳೆದ ೧೦ ವರ್ಷಗಳ ಹಿಂದೆ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯು ಇಲ್ಲಿಯವರೆಗೆ ೧೨ ಶಾಖೆಗಳನ್ನು ಪ್ರಾರಂಭಿಸಿ ನಂ ೧ ಸ್ಥಾನಕ್ಕೆ ತಲುಪಿದೆ. ನಮ್ಮ ಗ್ರಾಹಕರಿಗಾಗಿ ಸಂಸ್ಥೆಯು ವಿಮಾ ಸೌಲಭ್ಯ, ಅನಾರೋಗ್ಯಕ್ಕೆ ತುತ್ತಾದಲ್ಲಿ ತಕ್ಷಣ ಪರಿಹಾರ ದೊರಕಿಸುವ ವಿವಿಧ ವಿನೂತನ ಯೋಜನೆಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ತನ್ನದೆ ಆದ ವರ್ಚಸ್ಸನ್ನು ಬೆಳೆಸಿಕೊಂಡು ಬಂದಿದೆ. ತಮ್ಮ
ಅವಿರತವಾದ ಪರಿಶ್ರಮದಿಂದ ರಾಜ್ಯದ ಶ್ರೇಷ್ಟ ಸಹಕಾರಿ ಸಂಸ್ಥೆಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷರಾದ ಜಿ.ಜಿ ಶಂಕರರವರನ್ನು ಅಭಿನಂದಿಸಿದರು.

ಸೇಫ್ ಸ್ಟಾರ್ ಸೌಹಾರ್ದ ಸಂಸ್ಥೆಯ ಜನರಲ್ ಮ್ಯಾನೇಜರ್ ಮಹೇಶ ಶೆಟ್ಟಿಯವರು ಸರ್ವರಿಗೂ ಸ್ವಾಗತವನ್ನು ಕೋರಿ ೨೦೨೦-೨೧ನೇ ಸಾಲಿನ ನಡಾವಳಿಯನ್ನು ವಾಚಿಸಿದರು. ಶೇರು ಬಂಡವಾಳ ವರದಿ ವರ್ಷದ ಆರಂಭದಲ್ಲಿ ೨,೩೬,೬೭,೧೦೦ ಇದ್ದು ವರದಿ ವರ್ಷದಲ್ಲಿ ರೂ ೫೪,೮೦,೭೦೦ ಹೆಚ್ಚಳವಾಗಿದೆ. ರೂ ೭.೩೫,೦೦೦ ಪಾವತಿಯೊಂದಿಗೆ ವರ್ಷಾಂತ್ಯಕ್ಕೆ ೨,೮೪,೧೨,೮೦೦ ಕ್ಕೆ ಏರಿ ಶೇ೨೦.೦೫ರಷ್ಟು ಏರಿಕೆಯಾಗಿದೆ. ವರದಿ ವರ್ಷದಲ್ಲಿ ೫೦,೯೮,೮೩,೩೬೦ ರೂ ಸಾಲ ಮಂಜೂರಿಯಾಗಿದ್ದು ಗಮನಾರ್ಹವಾಗಿ ಶೇ ೯೧.೨೨ರಷ್ಟು ಸಾಲ ವಸೂಲಿಯನ್ನು ಮಾಡಲಾಗಿದೆ. ಮಹಿಳೆಯರನ್ನು ಸ್ವಾವಲಂಭಿಯಾಗಿಸಲು ಒಟ್ಟು ೨೩೬೯ ಸ್ವಸಹಾಯ ಗುಂಪುಗಳಿಗೆ ೭೨ ಕೋಟಿ ೫೨ಲಕ್ಷ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು. ಸಹಕಾರಿಯ ಅಧ್ಯಕ್ಷರಾದ ಜಿ.ಜಿ ಶಂಕರರವರು ಸಂಸ್ಥೆಯ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಶೇರು ಸದಸ್ಯರೊಂದಿಗೆ ಚರ್ಚಿಸಿ ಅನುಮೋಧನೆಯನ್ನು ಪಡೆದರು.

ಸೇಫ್ ಸ್ಟಾರ ಸೌಹಾರ್ದ ಸಹಕಾರಿಯ ವ್ಯವಹಾರವನ್ನು ಸಂಪೂರ್ಣ ಗಣಕಿಕೃತಗೋಳಿಸುವ ನಿಟ್ಟಿನಲ್ಲಿ ಸಾಲವನ್ನು ತುಂಬಲು ನೂತನವಾದ ಆಂಡ್ರಾಯ್ಡ ಅಪ್ಲಿಕೇಶನ್ ಬಿಡುಗಡೆಗೊಳಿಸಿ ಚಾಲನೆಯನ್ನು ನೀಡಲಾಯಿತು. ಪ್ರಸಕ್ತ ವರ್ಷದಲ್ಲಿ ಸಹಕಾರಿಯಲ್ಲಿ ಉತ್ತಮ ಸಾಧನೆಯನ್ನು ತೋರಿದ ಶಾಖೆಗಳನ್ನು ಹಾಗು ಸಂಸ್ಥೆಯಲ್ಲಿ ವ್ಯಯಕ್ತಿಕವಾಗಿ ಉತ್ತಮ ಸಾಧನೆಗೈದ ಹಲವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಅಧ್ಯಕ್ಷರಾದ ಜಿ.ಜಿ ಶಂಕರರವರು ಮಾತನಾಡಿ ೧೦ ವರ್ಷದ ಹಿಂದೆ ಪ್ರಾರಂಭವಾದ ಈ ಸಂಸ್ಥೆಯು ಬ್ಯಾಂಕಿAಗ ಕ್ಷೇತ್ರದಲ್ಲಿ ೪೦ ವರ್ಷಗಳ ಅನುಭವ ಹೊಂದಿರುವ ನಿರ್ದೆಶಕರುಗಳ ತಂಡದೊAದಿಗೆ ರಾಜ್ಯದಲ್ಲಿ ಅತ್ಯುತ್ತಮ ಸೇವೆಯನ್ನು ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಸಂಸ್ಥೆಯು ೧.೪೩ ಕೋಟಿ ಲಾಭವನ್ನು ಗಳಿಸಿದೆ ಮತ್ತು ೧೦% ಡಿವಿಡೆಂಟ್ ಘೋಷಿಸಿದರು. ಕರೋನಾ ಸಂದರ್ಭದಲ್ಲಿ ಸಿಬ್ಬಂಧಿಗಳಿಗೆ ಸಂಬಳವನ್ನು ನೀಡಿ, ಪ್ರಸಕ್ತ ವರ್ಷದಲ್ಲಿ ಶೇ ೨೫ರಷ್ಟು ವೇತನವನ್ನು ಹೆಚ್ಚಳ ಮಾಡಿದೆ. ಸಾಲಗಾರನು ಮೃತಪಟ್ಟಿದ್ದಲ್ಲಿ ಅವರ ಕುಟುಂಬದವರ ಮೇಲೆ ಉಂಟಾಗುವ ಸಾಲದ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಜೀವನ ಮೌಲ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಂಸ್ಥೆಯು ೧೦೦% ಪರಿಪಕ್ವತೆಯನ್ನು ಕಾಪಾಡಿಕೊಂಡು ಬಂದಿದ್ದು ರಾಜ್ಯ ಸಂಯುಕ್ತ ಸಹಕಾರಿ ಸಂಸ್ಥೆಯಿAದ ಪ್ರಶಂಸೆಯ
ನ್ನು ಗಳಿಸಿದೆ. ಸಂಸ್ಥೆಯ ಬೆಳವಣಿಗೆಗೆ ಕಾರಣಿಕರ್ತರಾದ ಠೇವಣಿದಾರರು, ನಿರ್ದೇಶಕರು, ಬಿಡಿಸಿ ಮ್ಯಾನೆಜರ, ಸಿಬ್ಬಂದಿಗಳು ಮತ್ತು ಗ್ರಾಹಕರ ಸಹಕಾರವನ್ನು ಸ್ಮರಿಸಿ ವಂದಿಸಿದರು.

ಸoಸ್ಥೆಯ ಉಪಾಧ್ಯಕ್ಷರಾದ ನಾಗರಾಜ ಎಂ ಇಂದ್ರರವರು ವಂದನಾರ್ಪಣೆಯನ್ನು ನೆರವೇರಿಸಿದರು
ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ. ಆರ್ ಹೆಗಡೆ, ವೆಂಕಟರಮಣ ಕಿಮಾನಿಕರ, ಗುಣಮಾಲಾ ಎನ್ ಇಂದ್ರ, , ಮಾರುತಿ ಗೌಡ, ಸುಬ್ರಾಯ ಎನ್ ಭಟ್, ನರಸಿಂಹ ಟಿ ಪಟಗಾರ್, ಲಿಫರ್ಡ ರೋಡ್ರಿಗಿಸ್, ರಾಜೇಶ್ ಎಲ್ ದೇಸಾಯಿ, ಲಕ್ಷö್ಮಣ ಜೆ ಪಟಗಾರ, ಪಾತ್ರೋನ್ ವಿ ಫರ್ನಾಂಡಿಸ್, ನಾಗೇಶ ಜೆ ದೇವಾಡಿಗ, ಗೊಪಾಲಕೃಷ್ಣ ಎಸ್ ಭಟ್, ಅಸಿಸ್ಟಂಟ್ ಜನರಲ್ ಮ್ಯಾನೇಜರ ಎಡ್ವಿನ್ ರೇಬೆಲ್ಲೊ, ವಸಂತ ಎಸ್ ನಾಯ್ಕ, ಶ್ರೀಪಾದ ಎಸ್ ಭಟ್, ರವಿಚಂದ್ರ ಹಳದಿಪುರ, ವಿಘ್ನೆಶ್ವರ ಎಮ್ ಹೆಗಡೆ, ನರೆಂದ್ರ ಪ್ರಭು, ಕೇಶವ ತಾಂಡೆಲ್ ಉಪಸ್ಥಿತರಿದ್ದರು

error: