May 3, 2024

Bhavana Tv

Its Your Channel

ಚಿಕ್ಕನಕೋಡ್‌ನಲ್ಲಿ ಪ್ರಾರಂಭಗೊOಡ ಪ್ರಾಥಮಿಕ ಅರೋಗ್ಯ ಉಪಕೇಂದ್ರ

ಹೊನ್ನಾವರ: ಆಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಹೊನ್ನಾವರ ತಾಲೂಕಿನ ಚಿಕ್ಕನಕೋಡ್‌ದಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಇಂದಿನಿoದ ಸೇವೆ ಒದಗಿಸಲು ಪ್ರಾರಂಭಿಸಿದೆ
ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆ ಇದಾಗಿದೆ. ಬಿಪಿ, ಶುಗರ್ ಲಿಮಿಟ್ ಚೆಕ್ ಸೇರಿದಂತೆ, ನೆಗಡಿ, ಜ್ವರ ಕೆಮ್ಮು ಮುಂತಾದ ಎಲ್ಲ ಕಾಯಿಲೆಗಳಿಗೂ ಉಚಿತವಾಗಿ ಸೂಕ್ತ ಚಿಕಿತ್ಸೆಯ ಜೊತೆಗೆ ಔಷಧಿ ಸಿಗಲಿದೆ.


ಚಿಕ್ಕನಕೋಡ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಘ್ನೇಶ್ವರ ಹೆಗಡೆ ರಿಬ್ಬನ್ ಕತ್ತರಿಸಿ ಜ್ಯೋತಿ ಬೆಳಗುವುದರ ಮೂಲಕ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು.
ಬಳಿಕ ಸಮುದಾಯ ಡಾಕ್ಟರ್ ಬಾಳು ಕಂಬ್ಳಿ ಮಾತನಾಡಿ ಎಲ್ಲ ರೀತಿಯ ಆರೋಗ್ಯ ಸೇವೆಯನ್ನು ಪ್ರಾಥಮಿಕವಾಗಿ ನೀಡುವುದರ ಜೊತೆಗೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸೂಕ್ತ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡ್ತೇವೆ. ಗರ್ಭಿಣಿಯರೂ ಸಹ ನಮ್ಮ ಆಸ್ಪತ್ರೆಗೆ ಬಂದು ಆರೋಗ್ಯ ಸಲಹೆ ಪಡೆದು, ಸರಕಾರಿ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಒಲವು ತೋರಬೇಕು ಎಂದರು.
ಲ್ಯಾಬ್ ಟೇಕ್ನಿಶಿಯನ್ ವಿನಾಯಕ ನಾಯ್ಕ್ ಮಾತನಾಡಿ ಕೆಲವೊಮ್ಮೆ ಗಂಭೀರ ಕಾಯಿಲೆ ಬಾಧಿಸಿದಾಗ, ದೂರದ ಆಸ್ಪತ್ರೆಗೆ ಹೋಗಿ ದಾಖಲಾಗುವ ವರೆಗೆ ಕಾಲ ಮಿಂಚಿರುತ್ತೆ. ಈಗ ನಮ್ಮ ಆರೋಗ್ಯ ಉಪಕೇಂದ್ರಕ್ಕೆ ಬಂದು ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಅನುಕೂಲವಾಗಲಿದೆ ಎಂದರು.
ಆಸ್ಪತ್ರೆಯ ಸ್ಥಳದಾನಿ ಮಾದೇವ ನಾಯ್ಕ್ ಮಾತನಾಡಿ ಆಸ್ಪತ್ರೆ ಸೌಲಭ್ಯವಿಲ್ಲದೆ ನಾವೆಲ್ಲ ಅನುಭವಿಸಿದ ಕಷ್ಟ, ಇಲ್ಲಿಗೇ ಕೊನೆಯಾಗಬೇಕು ಎಂಬ ಸದುದ್ದೇಶದಿಂದ ಆಸ್ಪತ್ರೆಗೆ ಸ್ಥಳವಕಾಶ ನೀಡಿದ್ದೇನೆ. ಜನರು ನೂರಕ್ಕೆ ನೂರು ಇದರ ಪ್ರಯೋಜನ ಪಡೆದಾಗ ಮಾತ್ರಾ ನನ್ನ ಉದ್ದೇಶ ಸಾರ್ಥಕವಾಗಲಿದೆ ಎಂದರು.
ಪಿಡಿಓ ಗೀತಾ ಹೆಗಡೆ ಮಾತನಾಡಿ ಏನೇ ಅರೋಗ್ಯ ಸಮಸ್ಯೆ ಆದರೂ ಈಗ ನಮ್ಮ ಹತ್ತಿರದಲ್ಲೇ ಆಸ್ಪತ್ರೆ ಲಭ್ಯವಿದೆ. ಆಸ್ಪತ್ರೆ ತೆರೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

error: