May 2, 2024

Bhavana Tv

Its Your Channel

ವಂಚನೆ ಎಸಗಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ರೂ. 30,000/- ದಂಡ

ಹೊನ್ನಾವರ ತಾಲೂಕ ಪಂಚಾಯತನಲ್ಲಿ ಎಫ್.ಡಿ.ಸಿ, ಅಂತ ಕಾರ್ಯನಿರ್ವಹಿಸುತ್ತಿದ್ದ ಕುಮಟಾ ತಾಲೂಕಿನ ದೇವರಹಕ್ಕಲ್ ನಿವಾಸಿಯಾದ ಹಾಲಿ ಪ್ರಭಾತನಗರ ನಿವಾಸಿಯಾದ ರವೀಂದ್ರ ವಾಸುದೇವ ನಾಯ್ಕ ಬ್ಯಾಂಕಿನ ಲೇಟರ್ ಹೆಡ್ ಮತ್ತು ಪಾರ್ಮ ನಂ. 35ರಲ್ಲಿ ಬ್ಯಾಂಕಿನವರು ಹೈಫೊಥಿüÃಕೇಶನ್ ಸ್ಥಗಿತಗೊಳಿಸಲು ಎ.ಆರ್.ಟಿ.ಓ, ಹೊನ್ನಾವರ ರವರ ಬಳಿಗೆ ಬರೆದ ಪತ್ರದಂತೆ ಸುಳ್ಳು ಪತ್ರ ಬರೆದು ಸುಳ್ಳು ಶೀಲ್ ಹಾಕಿ ಬ್ಯಾಂಕ ಮೇನೇಜರ್ ರವರ ನಕಲಿ ಸಹಿ ಮಾಡಿ ಅದನ್ನು ನೈಜವೆಂಬAತೆ ಹೊನ್ನಾವರ ಎ.ಆರ್.ಟಿ.ಓ. ಕಚೇರಿಯಲ್ಲಿ ಹಾಜರಪಡಿಸಿ ತನ್ನ ವಾಹನಕ್ಕೆ ಬ್ಯಾಂಕನೊAದಿಗೆ ಇರುವ ಹೈಪೋಥಿಕೇಶನ್ ಸ್ಥಗಿತಗೊಳಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿದ ಪ್ರಕರಣಕ್ಕೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕುಮಾರ ಜಿ. ಯವರು ವಿಚಾರಣೆ ನಡೆಸಿ 3 ವರ್ಷ ಜೈಲು ಶಿಕ್ಷೆ ಮತ್ತು ರೂಪಾಯಿ 30,000/- ದಂಡ ವಿಧಿಸಿರುತ್ತಾರೆ.

ಆರೋಪಿತನು ದಿನಾಂಕ 17-10-2008 ರಂದು ಹೊನ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕರ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರೋಪಿ ಕುಮಟಾ ಕಾರ್ಪೋರೇಶನ್ ಬ್ಯಾಕಿನಿಂದ ತನ್ನ ಬಾಬ್ತು ಟೊಯಿಟಾ ಕ್ವಾಲಿಸ್ ವಾಹನ ನಂ. ಕೆ.ಎ.-47-1771 ನೇದನ್ನು ಖರೀದಿಸುವಾಗ 5,70,000/- ರೂ ಸಾಲ ಮಾಡಿದ್ದನ್ನು ಮರುಪಾವತಿಸದೇ ತನ್ನ ವಾಹನಕ್ಕೆ ಬ್ಯಾಂಕನೊAದಿಗೆ ಇರುವ ಹೈಪೊಥೀಕೇಶನ್ ಸ್ಥಗಿತಗೊಳಿಸಿ ಪುನಃ ಬೇರೆ ಬ್ಯಾಂಕಿನಿAದ ವಾಹನದ ಮೇಲೆ ಸಾಲ ಪಡೆಯುವ ಇರಾದೆಯಿಂದ 2ನೇ ಆರೋಪಿ ಮಹೇಶ ಅಚ್ಯುತ ನಾಯ್ಕ ರವರ ಸಹಕಾರದಿಂದ ಬ್ಯಾಂಕಿಗೆ ಸಂಬAಧಿಸಿದ ಲೇಟರ್ ಹೆಡ್ ಮತ್ತು ಶೀಲನ್ನು ಮೊಸತನದಿಂದ ಸೃಷ್ಟಿಸಿಕೊಂಡಿದ್ದಲ್ಲದೇ, ಆರೋಪಿ ರವೀಂದ್ರ ವಾಸುದೇವ ನಾಯ್ಕ ಈತನು ಬ್ಯಾಂಕಿನ ಲೇಟರ್ ಹೆಡ್ ಮತ್ತು ಪಾರ್ಮ ನಂ. 35ರಲ್ಲಿ ಬ್ಯಾಂಕಿನವರು ಹೈಘೋಢೀಕೇಶನ್ ಸ್ಥಗಿತಗೊಳಿಸಲು ಎ.ಆರ್.ಟಿ.ಓ. ಹೊನ್ನಾವರ ರವರ ಬಳಿಗೆ ಬರೆದ ಪತ್ರದಂತ ಸುಳ್ಳು ಪತ್ರ ಬರೆದು ಸುಳ್ಳು ಶೀಲ್ ಹಾಕಿ ಬ್ಯಾಂಕ ಮೇನೇಜರ್ ರವರ ನಕಲಿ ಸಹಿ ಮಾಡಿ ಅದನ್ನು ನೈಜವೆಂಬAತೆ ಹೊನ್ನಾವರ ಎ.ಆರ್.ಟಿ.ಓ. ಕಚೇರಿಯಲ್ಲಿ ಹಾಜರಪಡಿಸಿ ತನ್ನ ವಾಹನಕ್ಕೆ ಬ್ಯಾಂಕನೊAದಿಗೆ ಇರುವ ಹೈಪೋಥಿಕೇಶನ್ ಸ್ಥಗಿತಗೊಳಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿದ ಆರೋಪಕ್ಕೆ ಆರೋಪಿತನ ವಿರುದ್ದ ಪ್ರಕರಣವನ್ನು ದಾಖಲಿಸಿ ಅದರ ಸಿ.ಸಿ.ನಂಬರ – 124/16 ರ ಪ್ರಕರಣಕ್ಕೆ ಕಾರಣನಾಗಿದ್ದಾನೆ.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಹೊನ್ನಾವರ ಪೊಲೀಸ್ ಠಾಣೆಯ ಆಗಿನ ಪಿ. ಎಸ್. ಐ. ಎನ್. ಜಿ. ಮುಕ್ರಿ ಮತ್ತು ಆಗಿನ ಪಿ. ಎಸ್. ಐ. ಎಫ್. ಕೆ. ದೊಡ್ಡನಿ ರವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ಕೆ. ಗೌಡ ಈ ಪ್ರಕರಣದಲ್ಲಿ 11 ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.

error: