May 2, 2024

Bhavana Tv

Its Your Channel

ಸಿಗಂದೂರಿನಲ್ಲಿ ರಾಜ್ಯಮಟ್ಟದ ಶ್ರೀ ನಾರಾಯಣ ಗುರು ಚಿಂತನ ಕಮ್ಮಟ

ಕಾರವಾರ : ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಹಾಗೂ ಸಾಗರ ಸಿಗಂಧೂರಿನ ಶ್ರೀ ಚೌಡಮ್ಮದೇವಿ ಟ್ರಸ್ಟ್ ಸಹಯೋಗದಲ್ಲಿ ಶ್ರೀ ನಾರಾಯಣ ಗುರು ಚಿಂತನೆಗಳ ರಾಜ್ಯ ಮಟ್ಟದ ವಿಚಾರ ಕಮ್ಮಟ ಜೂ.12 ಮತ್ತು 13 ರಂದು ಸಿಗಂದೂರು ಚೌಡಮ್ಮ ದೇವಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜೂ. 12 ರಂದು ಮುಂಜಾನೆ 10.30 ಕ್ಕೆ ಕಮ್ಮಟದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ಎಸ್.ರಾಮಪ್ಪ ನೆರವೇರಿಸಲಿದ್ದು, ಆಶಯ ನುಡಿಯನ್ನು ಖ್ಯಾತ ಲೇಖಕ, ಚಿಂತಕ ದಿನೇಶ್ ಅಮಿನ್ ಮಟ್ಟು ಆಡಲಿದ್ದಾರೆ. ಅಧ್ಯಕ್ಷತೆಯನ್ನು ಪತ್ರಕರ್ತ ನಾಗರಾಜ ನೇರಿಗೆ ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಲಕ್ಷö್ಮಣ ಕೊಡಸೆ ಬೆಂಗಳುರು, ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಮಂಗಳೂರು, ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ಪಾಲ್ಗೊಳ್ಳಲಿದ್ದಾರೆ.
ಜೂನ್ 13 ರಂದು ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಸೊಲೂರು ಈಡಿಗ ಮಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಸಮಾರೋಪ ನುಡಿ ಆಡಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಿಗಂಧೂರಿನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್., ಉತ್ತರ ಕನ್ನಡ ನಿಕಟಪೂರ್ವ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಬರಹಗಾರ ಶ್ರೀಧರ ಈಡೂರು ಪಾಲ್ಗೊಳ್ಳಲಿದ್ದಾರೆ.
ಕಮ್ಮಟದ ಸಂಚಾಲಕರಾಗಿ ಡಾ. ಮೋಹನ ಚಂದ್ರಗುತ್ತಿ, ಮಧುಸೂಧನ ಹೊಸಪೇಟೆ ಕಾರ್ಯನಿರ್ವಹಿಸಲಿದ್ದಾರೆ.
ರಾಜ್ಯಮಟ್ಟದ ಈ ಕಮ್ಮಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಯುವಕ ಯುವತಿಯರು ಪ್ರತಿನಿಧಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಧ್ಯಾ ಎಸ್. (ಮೊಬೈಲ್ 9535598200) ಅವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.

error: