April 28, 2024

Bhavana Tv

Its Your Channel

ಜನವರಿ, 15 ರಂದು ಅರಣ್ಯವಾಸಿಗಳ ನಿಯೋಗ ಮುಖ್ಯಮಂತ್ರಿಗೆ ಭೇಟಿ- ಧರಣಿ; 10 ಸಮಸ್ಯೆಗಳ ಪಟ್ಟಿಯೊಂದಿಗೆ ಮನವಿ.

ಕಾರವಾರ: ಅರಣ್ಯವಾಸಿಗಳ ಸಮಸ್ಯೆಗಳನ್ನ ಕರ್ನಾಟಕದ ಮುಖ್ಯಮಂತ್ರಿಜನವರಿ, 15 ರಂದು ಶಿರಸಿಗೆ ಆಗಮಿಸುವ ಸಂದರ್ಭದಲ್ಲಿಹತ್ತುಬೇಡಿಕೆಗಳ ಮನವಿ ಅರ್ಪಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರವೀಂದ್ರನಾಯ್ಕ ಹೇಳಿದರು.
ಅವರು ಕಾರವಾರದ ಪತ್ರಿಕಾ ಭವನದಲ್ಲಿಇಂದು ಜರುಗಿದ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರವನ್ನ ಸಲ್ಲಿಸುವುದು, 1978 ರ ಪೂರ್ವ ಕೇಂದ್ರ ಸರಕಾರದಿಂದ ಮಂಜೂರಿಗೆ ಶೀಫಾರಸ್ಸು ಆಗಿರುವ 2,513 ಕುಟುಂಬಳಿಗೆ ಹಕ್ಕು ಪತ್ರ ನೀಡುವುದು, ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದು ಹಿಂದಕ್ಕೆ ಪಡೆಯುವುದು, ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯಾಧಿಕಾರಿಗಳಿಂದ ಜರುಗುವ ದೌರ್ಜನ್ಯ ನಿಯಂತ್ರಿಸುವುದು, ಸರಕಾರದ ಸೌಲಭ್ಯದಿಂದ ಅರಣ್ಯವಾಸಿಗಳು ವಂಚಿತರಾಗದ ರೀತಿಯಲ್ಲಿ ಸವಲತ್ತು ಒದಗಿಸುವ ಕುರಿತು ಮುಖ್ಯಮಂತ್ರಿಗೆ ನೀಡುವ ಮನವಿಯಲ್ಲಿಪ್ರಸ್ತಾಪಿಸಲಾಗುವುದು.
ಜಿಲ್ಲಾದ್ಯಂತ ಜಿಲ್ಲಾದ್ಯಂತ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳು ಕಾನೂನು ಬಾಹಿರ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಮಕ್ಷಮ ಕ್ರೀಮಿನಲ್ ಮೊಕದ್ದಮೆ ದಾಖಲಿಸಿದ್ದು, ಸದ್ರಿ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಅಗ್ರಹ. ಹಾಗೂ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಹೋರಾಟಗಾರರ ವೇದಿಕೆಯ ಸಮಕ್ಷಮ ಉನ್ನತ ಮಟ್ಟದ ಸಮಿತಿ ರಚಿಸಲು ಮುಖ್ಯಮಂತ್ರಿಗೆ ಅಗ್ರಹಿಸಲಾಗುದೆಂದು ಅವರು ಹೇಳಿದರು.
ಅರಣ್ಯ ಹಕ್ಕು ಕಾಯಿದೆಯಲ್ಲಿವೈಫಲ್ಯ:
ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನವಿಧಿ-ವಿಧಾನ ಅನುಸರಿಸದೇ ಜರಗುತ್ತಿರುವ ಮಂಜೂರಿ ಪ್ರಕ್ರೀಯೆ. ಅರಣ್ಯ ಹಕ್ಕು ಕಾಯಿದೆ
ಅಡಿಯಲ್ಲಿ ಮಂಜೂರಿ ಸಂದರ್ಭದಲ್ಲಿ ಅಸಮರ್ಪಕ ಜಿಪಿಎಸ್‌ನ್ನು ಸರಿದೂಗಿಸುವುದು. ಅಲ್ಲದೇ, ಪಾರಂಪರಿಕ ಅರಣ್ಯ ವಾಸಿಗಳಿಗೆ ಸಾಂದರ್ಭೀಕ ದಾಖಲೆಗಳ ಆಧಾರದ ಮೇಲೆ ಮಂಜೂರಿ ನೀಡುವದು.
ಅರಣ್ಯ ಕಾಯಿದೆ ಅನುಷ್ಟಾನಕ್ಕೆ ಗ್ರಹಣ:
ಅರಣ್ಯ ಹಕ್ಕು ಕಾಯಿದೆ 2006 ರಲ್ಲಿ ನಿಯಮಾವಳಿ 2008 ಜಾರಿಗೆ ಬಂದು 16 ವರ್ಷಗಳಾದರೂ, ಕರ್ನಾಟಕ ರಾಜ್ಯದಲ್ಲಿ ಮಂಜೂರಿ ಪ್ರಕ್ರೀಯೆಗೆ ಗ್ರಹಣ ಹಿಡಿದಂತಾಗಿದೆ.
ದೇಶದಲಿ ಅರಣ್ಯ ಪ್ರದೇಶ ಮತ್ತು ಅರಣ್ಯ ಅವಲಂಭಿತವಾಗಿರುವ ಅರಣ್ಯವಾಸಿಗಳ ಸಂಖ್ಯೆಯಲ್ಲಿ ಕರ್ನಾಟಕ 5 ನೇ ಸ್ಥಾನದಲ್ಲಿದ್ದರೇ, ಅರಣ್ಯ ಹಕ್ಕು ಕಾಯಿದೆ ಪ್ರಗತಿಯಲ್ಲಿ ದೇಶದಲ್ಲಿ 16 ನೇ ಸ್ಥಾನದಲ್ಲಿರುವುದು ವಿಷಾದಕರವಾಗಿದೆ. ಆದ್ದರಿಂದ ಕಾಯಿದೆ ಅನುಷ್ಠಾನಕ್ಕೆ ಕಾಲಮಾನದಂಡ ನಿಗದಿಸುವದು.

error: