May 15, 2024

Bhavana Tv

Its Your Channel

ವಿಧಾನ ಪರಿಷತ್ ಚುನಾವಣೆ ; ಕುಮಟಾ ತಾಲೂಕಿನಲ್ಲಿ ಶೇ.೯೯.೭೧ರಷ್ಟು ಮತದಾನ

ಕುಮಟಾ: ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದ್ದು, ಕುಮಟಾ ತಾಲೂಕಿನಲ್ಲಿ ಶೇ.೯೯.೭೧ರಷ್ಟು ಮತದಾನ ದಾಖಲಾಗಿದೆ.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಮತಗಳನ್ನೆ ಅವಲಂಭಿಸಿರುವ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಕುಮಟಾ ತಾಲೂಕಿನಲ್ಲಿ ಶಾಂತಿಯುತವಾಗಿ ನಡೆಯಿತು. ತಾಲೂಕಿನಲ್ಲಿ ಪುರಸಭೆ ಕಚೇರಿ ಸೇರಿದಂತೆ ಒಟ್ಟು ೨೩ ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ ೭ರಿಂದ ಆರಂಭವಾದ ಮತದಾನ ಮಧ್ಯಾಹ್ನದ ಸಮಯದಲ್ಲಿ ಬಿರುಸುಗೊಂಡಿದ್ದು, ಸಾಯಂಕಾಲ ೪ ಗಂಟೆಗೆ ಮುಗಿಯಿತು. ಒಟ್ಟು ೩೪೩ ಮತದಾರರಿದ್ದು, ಅದರಲ್ಲಿ ಅಳಕೋಡ ಗ್ರಾಮ ಪಂಚಾಯತ್ ಮಹಿಳಾ ಸದಸ್ಯೆಯೋರ್ವಳನ್ನು ಹೊರತುಪಡಿಸಿ, ಉಳಿದ ೩೪೨ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಇನ್ನು ಕಳೆದ ಗ್ರಾಪಂ ಚುನಾವಣೆಯಲ್ಲಿ ಮೀಸಲಾತಿ ಸಂಬoಧ ಉಂಟಾದ ಗೊಂದಲದಿAದ ಅವಿರೋಧವಾಗಿ ಆಯ್ಕೆಯಾದ ಬರ್ಗಿ ಗ್ರಾಮ ಪಂಚಾಯತ್ ಸದಸ್ಯೆ ಲಕ್ಷ್ಮಿ ಗೊಂಡ ಅವರಿಗೆ ಜಿಲ್ಲಾಧಿಕಾರಿ ಅವರು ಮತದಾನದ ಹಕ್ಕು ನೀಡಿದ್ದರಿಂದ ಅವರು ಕೂಡ ಇಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

error: