May 2, 2024

Bhavana Tv

Its Your Channel

ಕುಮಟಾ ತಾಲೂಕಿನ ಕೋನಳ್ಳಿಯಲ್ಲಿ ನಡೆದ ೮ ದಿನಗಳ ಮದ್ಯ ವರ್ಜನ ಶಿಬಿರ

ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ನವದುರ್ಗಾ ಸಭಾಭವನದಲ್ಲಿ ನಡೆದ ೮ ದಿನಗಳ ಮದ್ಯ ವರ್ಜನ ಶಿಬಿರದಲ್ಲಿ ಕುಡಿತ ಬಿಟ್ಟು ೫೫ ಮಂದಿ ನವ ಜೀವನ ಸದಸ್ಯರು ಹೊಸ ಬದುಕಿಗೆ ಕಾಲಿಟ್ಟರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ, ಕೋನಳ್ಳಿಯ ಸಂಯುಕ್ತಾಶ್ರಯದಲ್ಲಿ ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದಲ್ಲಿ ಡಿ. ೧೪ರಿಂದ ಡಿ.೨೧ರ ವರೆಗೆ ನಡೆದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೧೪೯೩ನೇ ಮದ್ಯ ವರ್ಜನ ಶಿಬಿರದಲ್ಲಿ ೫೫ ಮಂದಿ ಮದ್ಯ ವ್ಯಸನಿಗರು ಪಾಲ್ಗೊಂಡಿದ್ದರು. ಶಿಬಿರ ಆರಂಭವಾದಾಗಿನಿAದಲೂ ಮದ್ಯ ವ್ಯಸನಿಗರು ಹಲವು ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಖುಷಿಯಾಗಿರುವಂತೆ ನೋಡಿಕೊಳ್ಳಲಾಯಿತು.
ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿತುಕೊಂಡ ಶಿಬಿರಾರ್ಥಿಗಳು ಕುಡಿತವನ್ನು ಬಿಟ್ಟು, ತಮ್ಮ ಕುಟುಂಬದೊAದಿಗೆ ಹೊಸ ಜೀವನಕ್ಕೆ ಕಾಲಿಟ್ಟರು. ಇದಕ್ಕೆ ಕಾರಣರಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಗೆ ಮತ್ತು ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿಗೆ ಧನ್ಯವಾದ ಸಲ್ಲಿಸಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ನವ ಜೀವನ ಸಮಿತಿಗೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಗಂಗಾಧರ ಭಟ್ ಮಾತನಾಡಿ, ನವ ಜೀವನ ಸದಸ್ಯರಿಗೆ ಶುಭ ಹಾರೈಸಿದರು.

ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ, ಕೋನಳ್ಳಿಯ ಅಧ್ಯಕ್ಷ ಎಚ್ ಆರ್ ನಾಯ್ಕ ಮಾತನಾಡಿ, ಕುಡಿತದ ಚಟ ಬಿಡಿಸುವ ಗ್ರಾಮಾಭಿವೃದ್ಧಿಯ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ ನವ ಜೀವನ ಸದಸ್ಯರು ಮತ್ತೆ ತಪ್ಪು ಹೆಜ್ಜೆ ಹಾಕದೇ, ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಶ್ರಮವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಸ್ತುವಾರಿ ಪ್ರೊ. ಎಂ ಜಿ ಭಟ್, ಪ್ರಮುಖರಾದ ಸತೀಶ ಶೇಟ್, ಜಯಾ ಶೇಟ್, ವೈಭವ ನಾಯ್ಕ, ವಿ ಐ ಹೆಗಡೆ, ಮಂಗಲಾ ಅಡಿಗುಂಡಿ, ಯೋಜನೆಯ ಸಮನ್ವಯಾಧಿಕಾರಿ ನೇತ್ರಾವತಿ ಗೌಡ, ಆಶಾ ಚಂದ್ರ ಇತರರು ಇದ್ದರು.

error: