May 14, 2024

Bhavana Tv

Its Your Channel

ಅಘನಾಶಿನಿ ಕಡಲ ತೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಚಿಪ್ಪಿ ಗಣಿಗಾರಿಕೆ ವಿರೋಧಿಸಿ ಚಿಪ್ಪಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ತಡೆದು ಪ್ರತಿಭಟನೆ

ಕುಮಟಾ ತಾಲೂಕಿನ ಅಘನಾಶಿನಿ ಕಡಲ ತೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಚಿಪ್ಪಿ ಗಣಿಗಾರಿಕೆಯನ್ನು ವಿರೋಧಿಸಿ ಅಲ್ಲಿನ ಸ್ಥಳೀಯರು ಚಿಪ್ಪಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ತಡೆದು ಪ್ರತಿಭಟನೆ ನಡೆಸಿದರು.

ಈ ಭಾಗದಲ್ಲಿ ೧೦ ಸಾವಿರ ಮೀನುಗಾರ ಕುಟುಂಬಗಳು ಮೀನುಗಾರಿಕೆಯನ್ನು ನಂಬಿಕೊAಡು ಬುದುಕು ಕಟ್ಟಿಕೊಂಡಿವೆ. ಬೆಳಚು, ಕಲಗಾ, ಮೀನು ಹಿಡಿಯುವ ಮೂಲಕ ಅವರೆಲ್ಲರ ಹೊಟ್ಟೆಪಾಡು ನಡೆದಿದೆ. ಇಲ್ಲಿಂದ ಉಪ್ಪಿನಪಟ್ಟನದ ವರೆಗೆ ೨೧ ಕಿಮೀ ಮೀನುಗಾರಿಕೆಗೆ ಪರವಾನಗಿ ನೀಡಿದ ಸರ್ಕಾರ ಇದೇ ಪ್ರದೇಶದಿಂದ ೧೨೦೦ ಎಕರೆ ಪ್ರದೇಶದಲ್ಲಿ ಚಿಪ್ಪಿ ಗಣಿಗಾರಿಕೆ ನಡೆಸಲು ಖಾಸಗಿ ವ್ಯಕ್ತಿಗೆ ಪರವಾನಿಗೆ ನೀಡಿದೆ. ಮೀನುಗಾರಿಕೆ ನಡೆಸುವ ಜಾಗದಲ್ಲಿ ಚಿಪ್ಪಿ ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಅವೈಜ್ಞಾನಿಕವಾಗಿದೆ. ಮೀನುಗಾರಿಕೆಗಾಗಿ ಬಲೆ ಹಾಕುತ್ತೇವೆ. ಮೀನುಗಾರಿಕೆ ಸಲಕರಣೆಗಳಿಡುತ್ತೇವೆ. ಅವೆಕ್ಕೆಲ್ಲ ಚಿಪ್ಪಿ ಗಣಿಗಾರಿಕೆಯಿಂದ ಹಾನಿಯಾಗುತ್ತದೆ. ಅದೆಲ್ಲದ್ದಕ್ಕೂ ಮಿಗಿಲಾಗಿ ಮತ್ಸ್ಯ ಸಂತತಿಗಳು ನಾಶವಾಗುತ್ತದೆ. ಅಪರೂಪದ ಜಾತಿಯ ಮೀನುಗಳು ನಾಶವಾಗುತ್ತದೆ. ಬೆಳಚು, ಕಲಗಾ, ಸಿಗಡಿಯಂತಹ ಮೀನುಗಳು ಬೆಳೆಯದೇ ಮೀನುಗಾರರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಹ ದುಸ್ಥಿತಿ ಎದುರಾಗುತ್ತದೆ. ಹಾಗಾಗಿ ಈ ಭಾಗದಲ್ಲಿ ನೀಡಲಾದ ಚಿಪ್ಪಿ ಗಣಿಗಾರಿಕೆಯ ಪರವಾನಗಿಯನ್ನು ಶಾಶ್ವತವಾಗಿ ರದ್ದು ಪಡಿಸಬೇಕೆಂಬ ಒತ್ತಾಯ ಈ ಭಾಗದ ಮೀನುಗಾರರಿಂದ ವ್ಯಕ್ತವಾಗಿದೆ. ಈ ಸಂಬAಧ ಕೆಲ ತಿಂಗಳುಗಳಿAದ ಮೀನುಗಾರರು ಮತ್ತು ಚಿಪ್ಪಿ ಗಣಿಗಾರಿಕೆ ನಡೆಸುವವರ ನಡುವೆ ಘರ್ಷಣೆ ನಡೆಯುತ್ತಿದೆ. ತಮ್ಮ ಮೀನುಗಾರಿಕೆಯ ವೃತ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೀನುಗಾರರೆಲ್ಲ ಒಗ್ಗಟ್ಟಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇದರ ಭಾಗವಾಗಿಯೇ ಇಂದು ಅಘನಾಶಿಗೆ ಚಿಪ್ಪಿ ಗಣಿಯನ್ನು ತುಂಬಿಕೊAಡು ಹೋಗಲು ಬಂದ ಲಾರಿಯನ್ನು ಸ್ಥಳೀಯ ಮೀನುಗಾರರು ತಡೆದು ಹಠಾತ್ ಪ್ರತಿಭಟನೆ ನಡೆಸಿದ್ದಾರೆ. ಅವೈಜ್ಞಾನಿಕ ಚಿಪ್ಪಿ ಗಣಿಗಾರಿಕೆಯ ಪರವಾನಗಿ ರದ್ದು ಪಡಿಸುವ ತನಕ ಚಿಪ್ಪಿ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಮೀನುಗಾರರು ಪಟ್ಟು ಹಿಡಿದಿದ್ದಾರೆ. ನದಿ ತೀರದಲ್ಲಿ ಸಂಗ್ರಹಿಸಿಟ್ಟ ಲಕ್ಷಾಂತರ ರೂ. ಮೌಲ್ಯದ ಚಿಪ್ಪಿಗೆ ರಕ್ಷಣೆ ನೀಡಲು ಆಗಮಿಸಿದ ಕುಮಟಾ ಠಾಣೆ ಪೊಲೀಸರು ಪ್ರತಿಭಟನಾನಿರತ ಮೀನುಗಾರರಿಗೆ ಚಿಪ್ಪಿ ಗಣಿಯತ್ತ ಸುಳಿಯಲು ಸಹ ಬಿಟ್ಟಿಲ್ಲ. ಒಂದು ವೇಳೆ ಚಿಪ್ಪಿ ಬಳಿ ಹೋದರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಾರೆ. ಬಡ ಮೀನುಗಾರರ ರಕ್ಷಣೆ ಮಾಡುವ ಬದಲೂ ಬಂಡವಾಳಶಾಹಿಗಳ ರಕ್ಷಣೆಗೆ ಪೊಲೀಸ್ ಇಲಾಖೆ ನಿಂತಿರುವುದು ನಮ್ಮ ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಪ್ರತಿಭಟನಾನಿರತ ಮೀನುಗಾರರು ಗಂಭೀರವಾಗಿ ಆರೋಪಿಸಿದರು.

ಪ್ರತಿಭಟನೆಯಲ್ಲಿ ಮೀನುಗಾರರಾದ ಈಶ್ವರ ಹರಿಕಂತ್ರ, ವೆಂಕಟಿ ಹರಿಕಂತ್ರ, ರಾಮಕೃಷ್ಣ ಹರಿಕಂತ್ರ, ಶಿವಾನಂದ ಹರಿಕಂತ್ರ, ಅಣ್ಣಪ್ಪ ಹರಿಕಂತ್ರ, ಜಟ್ಟಪ್ಪ ಹರಿಕಂತ್ರ, ಭಾಗಿ ಹರಿಕಂತ್ರ, ನಾಗಪ್ಪ ಹರಿಕಂತ್ರ, ನಾಗವೇಣಿ ಹರಿಕಂತ್ರ, ಲಕ್ಷ್ಮಿ ಹರಿಕಂತ್ರ, ಚಂದ್ರಕಲಾ ಹರಿಕಂತ್ರ ಸೇರಿದಂತೆ ನೂರಕ್ಕೂ ಅಧಿಕ ಮೀನುಗಾರರು ಉಪಸ್ಥಿತರಿದ್ದರು.

error: