April 29, 2024

Bhavana Tv

Its Your Channel

ಯಾವುದೇ ಸರ್ಕಾರ ಬಂದರೂ ಅರ್ಚಕರ ಬಗ್ಗೆ ಅನುಕಂಪವಿಲ್ಲ – ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ

ನಾಗಮಂಗಲ:– ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ನಾಗಮಂಗಲ ತಾಲೂಕು ಅರ್ಚಕರ ಸಂಘದ ವತಿಯಿಂದ ನೂತನ ಸಂವತ್ಸರದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸರ್ಕಾರದಿಂದ ದೊರೆಯುವ ವಿಮಾ ಸೌಲಭ್ಯ ಕುರಿತ ಕಾರ್ಯಕ್ರಮ ಏರ್ಪಡಿಸಲಾಯಿತು

ವೇದಿಕೆ ಕಾರ್ಯಕ್ರಮವನ್ನು ಗಣ್ಯರೊಂದಿಗೆ ವೇದ ಘೋಷಣೆಳೊಂದಿಗೆ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು

ಕಾರ್ಯಕ್ರಮ ಉದ್ದೇಶಿಸಿ ಮಂಡ್ಯ ಜಿಲ್ಲಾಧ್ಯಕ್ಷರಾದ ಶ್ರೀನಿವಾಸಮೂರ್ತಿ ಮಾತನಾಡಿ
ಯಾವುದೆ ಸರ್ಕಾರಗಳು ಬಂದರು ನಮ್ಮ ಹಿಂದೂ ಅರ್ಚಕರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದು, ಇದು ಸರಿಯಾದ ಕ್ರಮವಲ್ಲ ಮುಜರಾಯಿ ಇಲಾಖೆಯ ದೇವಾಲಯಗಳ ರಕ್ಷಣೆ ಹಾಗೂ ಪೂಜಾ ಕೈ ಕಾರ್ಯದಲ್ಲಿ ತೊಡಗಿರುವ ಕರ್ನಾಟಕದ ಅರ್ಚಕರುಗಳಿಗೆ ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಮತ್ತು ಪ್ರಸ್ತುತ ಇರುವ ತಸ್ತಿಕ್ ಹಣವನ್ನು 10.000 ವರೆಗೆ ಹೆಚ್ಚುವರಿಯಾಗಿ ನಿಗದಿಪಡಿಸಬೇಕು ಈ ಹಿಂದೆ ಅರ್ಚಕರಿಗೆ ಮೈಸೂರಿನ ರಾಜಮಹಾರಾಜರು ಬಿಟ್ಟರೆ ಯಡಿಯೂರಪ್ಪ ಮಾತ್ರ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅರ್ಚಕರಿಗೆ ತಸ್ತಿಕ್ ಹಣವನ್ನು ನೀಡಲು ತೀರ್ಮಾನ ಮಾಡಿದ್ದರು ಎಂದು ತಿಳಿಸಿದರು

ನಾಗಮಂಗಲ ತಾಲೂಕು ಅರ್ಚಕರ ಸಂಘದ ತಾಲೂಕು ಅಧ್ಯಕ್ಷರಾದ ಸಂತೋಷ್ ಕುಮಾರ್ ಮಾತನಾಡಿ ಅರ್ಚಕರಿಗೆ ಸರ್ಕಾರ ವಿಮೆ ಮಾಡಿಸುವ ಬಗ್ಗೆ ಪ್ರೋತ್ಸಾಹ ನೀಡುತ್ತಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಅರ್ಚಕರಗಳಿಗೆ ವಿವರಿಸಿದರು ಹಾಗೂ ಅರ್ಚಕರ ಹೆಸರಿನಲ್ಲಿ ಇಲ್ಲಿಯವರೆಗೂ ಇನಾಮು
ಜಮೀನು ಇರಲಿಲ್ಲ, ಸರ್ಕಾರದ ಒಡೆತನದಲ್ಲಿತ್ತು, ಅದನ್ನ ಅರ್ಚಕರ ಹೆಸರಿಗೆ ಮಾಡಿಸುವ ಬಗ್ಗೆ ಮಾಹಿತಿ ನೀಡಿದರು.

ನಾಗಮಂಗಲ ತಾಲೂಕಿನಾದ್ಯಂತ ಇರುವ ಸುಮಾರು 576 ದೇವಸ್ಥಾನದ ಅರ್ಚಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದು ವೇದಿಕೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಮತ್ತು ಅರ್ಚಕರಿಗೆ ತಾಲೂಕು ಸಂಘದ ಐಡಿ ಕಾರ್ಡ್ ಗಳನ್ನು ವಿತರಿಸಿದರು ಹಿರಿಯ ಅರ್ಚಕರಿಗೆ ಸನ್ಮಾನಿಸಿ ಗೌರವಿಸಲಾಯಿತು

ಸಮಾರಂಭದಲ್ಲಿ ಶಿರಸ್ತೇದಾರ್ ಪ್ರಕಾಶ್, ಚುನಾವಣಾ ಅಧಿಕಾರಿ ಉಮಾಶಂಕರ್, ಸೌಮ್ಯಕೇಶವ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ತಿರುನಾರಾಯಣ ಹಾಗೂ ತಾಲೂಕಿನ ಅರ್ಚಕರು ಭಾಗವಹಿಸಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: