April 29, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲ್ ವಿಜ್ಞಾನ ಪ್ರಬಂಧ ಮಂಡನೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಮಟಾ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಉತ್ತರಕನ್ನಡ ಜಿಲ್ಲಾ ಘಟಕದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ಆನ್ ಲೈನ್ ಮೂಲಕ ನಡೆದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡ ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಹಿರಿಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳ ತಂಡದಲ್ಲಿ ತನುಷ್ ಸಿ. ನಾಯಕ ತಂಡದ ನಾಯಕ ಹಾಗೂ ನಾಗಶ್ರೀ ಎಂ ಗೌಡ ಇವರು ತಯಾರಿಸಿದ “ಫ್ರುಟ್ ಸ್ಯಾನಿಟೈಸರ್ ಮಾದರಿ” ಪ್ರಥಮ ಸ್ಥಾನ ಪಡೆದಿದೆ. ಗ್ರಾಮೀಣ ಕಿರಿಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳ ತಂಡದಲ್ಲಿ ಶಿವಪ್ರಸಾದ ಆರ. ನಾಯಕ ತಂಡದ ನಾಯಕ ಹಾಗೂ ಚೈತನ್ಯ ಜಿ. ಮುಕ್ರಿ ಇವರು ತಯಾರಿಸಿದ “ಆಹಾರ ಬೆಳೆಯ ರಕ್ಷಕ ಮಾದರಿ” ದ್ವಿತೀಯ ಸ್ಥಾನ ಪಡೆದಿದೆ. ಎರಡು ತಂಡದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರತಿವರ್ಷವೂ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ವಿಶೇಷವಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಮಹಾತ್ಮ ಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಕಾರ್ಯದರ್ಶಿ ಮೋಹನ ಕೆರೆಮನೆ, ಸದಸ್ಯರು, ಮುಖ್ಯೋಪಾಧ್ಯಾಯರಾದ ರೋಹಿದಾಸ ಗಾಂವಕರ, ಶಿಕ್ಷಕ ವೃಂದದವರು, ಆಶ್ರಯ ಫೌಂಡೇಶನ್ ಅಧ್ಯಕ್ಷರಾದ ರಾಜೀವ ಗಾಂವಕರ, ಗ್ರಾಮ ಪಂಚಾಯತ ಅಧ್ಯಕ್ಷರಾದ ಕುಸುಮಾ ಪಡ್ತಿ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶಾಂತಾ ಎನ್ ನಾಯಕ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನೀಲಕಂಠ ನಾಯಕ, ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರಾದ ರಾಜು ಕೇ ಗಾಂವಕರ. ಸ್ಪಂದನ ಫೌಂಡೇಶನ್‌ನ ಎನ್. ರಾಮು ಹಿರೇಗುತ್ತಿ, ಊರ ನಾಗರಿಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾ, ಕೇತ್ರ ಶಿಕ್ಷಣಾಧಿಕಾರಿಗಳು ಕುಮಟಾ ಇವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭಹಾರೈಸಿದರು.


error: