April 29, 2024

Bhavana Tv

Its Your Channel

ಫೆ. 11 ರಂದು ಮಣಕಿ ಮೈದಾನದಲ್ಲಿ ನಾಡವರ ಸಮಾಜದವರಿಗೆ ನಾಡವರ ಪ್ರೀಮಿಯರ್ ಲೀಗ್

ಕುಮಟಾ: ಕಳೆದ 2 ವರ್ಷಗಳಿಂದ ಅತ್ಯುತ್ತಮವಾಗಿ ನಾಡವರ ಪ್ರೀಮಿಯರ್ ಲೀಗ್‌ನ್ನು ಜಿಲ್ಲೆಯಲ್ಲಿ ಮಾದರಿಯಾಗಿ ನಡೆಸಲಾಗಿದ್ದು, ಫೆ. 11 ರಂದು ಮಣಕಿ ಮೈದಾನದಲ್ಲಿ ನಾಡವರ ಸಮಾಜದವರಿಗೆ ಮಾತ್ರ ಟೂರ್ನಾಮೆಂಟ್ ನಡೆಯಲಿದ್ದು, ಫೆ.12 ಮತ್ತು 13 ರಂದು ಮುಕ್ತ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದೆ ಎಂದು ಜಿ.ಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ ತಿಳಿಸಿದರು.

ಅವರು ಸೋಮವಾರ ಕುಮಟಾ ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಈ ಕುರಿತು ಮಾಹಿತಿ ನೀಡಿದರು. ಮುಕ್ತ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಚಾಂಪಿಯನ್ ತಂಡಕ್ಕೆ 4,04,040 ರೂ. ಮತ್ತು ಆಕರ್ಷಕ ಟ್ರೋಫಿ, ರನ್ನರ್‌ಅಪ್ ತಂಡಕ್ಕೆ 2,52,525 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದರು ಈ ವರ್ಷದ ಟೂರ್ನಾಮೆಂಟ್‌ನಲ್ಲಿ 10 ಸಾವಿರ ಜನರು ಕುಳಿತು ವೀಕ್ಷಣೆ ಮಾಡಲು ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಬೆಂಗಳೂರಿನ ಎಂ.ಎಸ್ ಸ್ಪೋಟ್ಸ್ ಅವರಿಂದ ವಿಡಿಯೋಗ್ರಫಿ ನಡೆಯಲಿದೆ. ರಾಷ್ಟ್ರಮಟ್ಟದ ಟೂರ್ನಾಮೆಂಟ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಭಾಗವಹಿಸಲಿದ್ದು, ಕೇರಳ, ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಮತ್ತಿತರ ಭಾಗಗಳಿಂದ ಕ್ರಿಕೆಟ್ ತಂಡಗಳು ಪಾಲ್ಗೊಳ್ಳಲಿದ್ದು, ನಾಡವರ ಪ್ರೀಮಿಯರ್ ಲೀಗ್‌ಗೆ ಕುಮಟಾ ಹಾಗೂ ಜಿಲ್ಲೆಯ ಜನರು ಸಹಕಾರ ನೀಡಿ, ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊAಡರು.

ಸುದ್ದಿಗೋಷ್ಠಿಯಲ್ಲಿ ತೊರ್ಕೆ ಗ್ರಾ.ಪಂ ಅಧ್ಯಕ್ಷ ಆನಂದು ಕವರಿ ನಾಡವರ ಪ್ರೀಮಿಯರ್ ಲೀಗ್ ಅಧ್ಯಕ್ಷ ಜಗದೀಶ.ಡಿ.ನಾಯಕ, ಕಾರ್ಯದರ್ಶಿ ಕುಮಾರ ಕವರಿ ತೊರ್ಕೆ, ಪ್ರಮುಖರಾದ ವಿನಾಯಕ ನಾಯಕ, ಮಹೇಶ ನಾಯಕ ವನ್ನಳ್ಳಿ ಚಂದ್ರಹಾಸ ನಾಯಕ, ಸಿರಿ ನಾಯಕ, ರಾಘವೇಂದ್ರ ನಾಯಕ, ಪ್ರದೀಪ ನಾಯಕ, ಮನೋಜ ನಾಯಕ, ಶಾಶ್ವತ ಕವರಿ, ತಿಮ್ಮಪ್ಪ ನಾಯಕ, ಕೇಶವ ನಾಯಕ, ಧೀರಜ ನಾಯ್ಡು, ಅಕ್ಷಯ ನಾಯಕ, ವಿನಾಯಕ ನಾಯಕ, ಪ್ರವೀಣ ನಾಯಕ, ಕಾರ್ತಿಕ ಉದ್ದಂಡ ನಾಯಕ, ಪ್ರಶಾಂತ ಸೇರಿದಂತೆ ಮತ್ತಿತರರು ಇದ್ದರು.
error: