April 29, 2024

Bhavana Tv

Its Your Channel

ಸುಲಭ ಸೇವಾ ಸಂಸ್ಥೆ ಕುಮಟಾ ವತಿಯಿಂದ ಸುಲಭ ಸಾಲ ವಿತರಣೆ

ಕುಮಟಾ :- ಸುಲಭ ಸೇವಾ ಸಂಸ್ಥೆ (ರಿ) ಕುಮಟಾ ಮಹಿಳಾ ಸಬಲೀಕರಣದ ಅಡಿಯಲ್ಲಿ ರಚನೆಯಾದ ಮಹಿಳಾ ಸ್ವ-ಸಹಾಯ ಹಾಗೂ ಜಂಟಿ ಭಾಧ್ಯತಾ ಗುಂಪುಗಳಿಗೆ ಸುಲಭ ಸಾಲವನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ದಿವಾಕರ ಅಘನಾಶಿನಿಯವರ ಮಾರ್ಗ ದರ್ಶನದಲ್ಲಿಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು ಆಧಾಯೋತ್ಪನ್ನ ಚಟುವಟಿಕೆಗಳಾದ ಮೀನುಮಾರಾಟ, ಕೃಷಿ, ಟೈಲರಿಂಗ್, ಅಂಗಡಿ ವ್ಯಾಪಾರ ಇಂತಹ ಉದ್ದೇಶಕ್ಕೆ ಒತ್ತುನಿಡಿ ಮಹಿಳೆಯರಿಗೆ ಸಾಲದ ಸಹಾಯವನ್ನ ಸುಲಭ ಸೇವಾ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ. ಸಂಘ ರಚನೆ, ಸಾಲ ನೀಡುವ ಎಲ್ಲಾ ಜವಾಬ್ದಾರಿಯನ್ನು ಮಹಿಳಾ ಸಿಬ್ಬಂದಿ ನಿರ್ವಹಿಸುವ ಮೂಲಕ ಮಹಿಳಾ ಸಬಲೀಕರಣ ಸಂಸ್ಥೆಯು ಅರ್ಥ ಪೂರ್ಣಗೊಳಿಸಿದೆ. ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ಮೆನೇಜರ್ ಪ್ರೀತಿ ಗೌಡ. ಗೀತಾ ಗೌಡ, ಸುಲಭ ಸಹಾಯಕಿ ವಿದ್ಯಾ ಭಂಡಾರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ನಟರಾಜ ಗದ್ದೆಮನೆ

error: