April 29, 2024

Bhavana Tv

Its Your Channel

ಹೆರವಟ್ಟಾದಲ್ಲಿ ಸಿ.ಎಸ್.ಸಿ ಕೇಂದ್ರ ಉದ್ಘಾಟಿಸಿದ ಉಪನ್ಯಾಸಕ ಆನಂದು ಗಾಂವ್ಕರ್

ಕುಮಟಾ ತಾಲೂಕಿನ ಹೆರವಟ್ಟಾದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಹಾಗೂ ಸರಕಾರದ ಯೋಜನೆಯಾದ ಸಿ.ಎಸ್.ಸಿ ಕೇಂದ್ರವನ್ನು ನೆಲ್ಲಿಕೇರಿ ಕಾಲೇಜಿನ ಉಪನ್ಯಾಸಕಾರದ ಆನಂದು ಗಾಂವ್ಕರ್ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು ಇ-ಶ್ರಮ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡರೆ ಕಾರ್ಮಿಕರು ಒಂದು ವರ್ಷಕ್ಕೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಆಕಸ್ಮಿಕ ಸಾವು ಅಥವಾ ಪೂರ್ಣ ಅಂಗವೈಕಲ್ಯತೆಗೆ ರೂ 2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ಪರಿಹಾರವನ್ನು ಪಡೆಯಬಹುದಾಗಿದೆ. ಜೊತೆಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದಲ್ಲದೇ ವಲಸೆ ಕಾರ್ಮಿಕರ ಉದ್ಯೋಗಾವಕಾಶಕ್ಕೂ ಸಹಾಯಕವಾಗಲಿದೆ ಎಂದರು.

ಯೋಜನಾಧಿಕಾರಿ ನಾಗರಾಜ ನಾಯ್ಕ ಮಾತಾನಾಡಿ ನಮ್ಮ ಪೂಜ್ಯರ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖೇನ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಜನತೆಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದೇವೆ ಅದೇ ರೀತಿ ಗ್ರಾಮಸ್ಥರು ಎಲ್ಲರೂ ಕೂಡ ಇ-ಶ್ರಮ ಕಾರ್ಡನ್ನು ಪಡೆಯಬೇಕು ಮತ್ತು ಎಲ್ಲ ತರಹದ ಸೌಲಭ್ಯಗಳಾದ ಆಧಾರ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಹಾಗೂ ಬ್ಯಾಂಕ್ ಅಕೌಂಟ್ ಕೂಲಿಕಾರ್ಮಿಕರ ಕಾರ್ಡ್, ಇತ್ಯಾದಿ ಸೌಲಭ್ಯಗಳಿದ್ದು ಮುಂದಿನ ದಿನಗಳಲ್ಲಿ 748 ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದರು

ಈ ಸಂದರ್ಭದಲ್ಲಿ ಎನ್.ಕೆ.ಭಟ್ಟ್, ಉಪೇಂದ್ರ ಶಾನಭಾಗ, ಮನೋಹರ್ ಶಾನಭಾಗ,ರೇಖಾ ಶಾನಭಾಗ,ವಲಯದ ಮೇಲ್ವಿಚಾರಕರು ನೇತ್ರಾವತಿ ಗೌಡ , ಸೇವಾ ಪ್ರತಿನಿಧಿ ಗಿರಿಜಾ ಭಟ್ಟ್, ಒಕ್ಕೂಟದ ಅದ್ಯಕ್ಷೆ ಕಲ್ಪನಾ ನಾಯಕ,, ಅನುಷಾ ನಾಯ್ಕ ಇದ್ದರೂ

error: