April 29, 2024

Bhavana Tv

Its Your Channel

ವೈಯಕ್ತಿಕ ವಿಚಾರಕ್ಕೆ ಕೈ ಹಾಕಿದರೆ ಸಾಕಷ್ಟು ವಿಷಯವಿದೆ-ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೋನಿ

ಕುಮಟಾ: ನಮ್ಮ ಜೆಡಿಎಸ್ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಪ್ರಧಾನಿ ದೇವೆ ಗೌಡ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಮುಖಂಡರ ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ಆರೋಪ ಮಾಡಿರುವ ಬಿಜೆಪಿ ಮಂಡಲಾಧ್ಯಕ್ಷರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಇವರ ವೈಯಕ್ತಿಕ ವಿಚಾರಕ್ಕೆ ಕೈ ಹಾಕಿದರೆ ಸಾಕಷ್ಟು ವಿಷಯವಿದೆ. ಪಕ್ಷದ ಓರ್ವ ಮುಖಂಡನಿಗೆ ಐಆರ್‌ಬಿ ಕಚೇರಿ ಪಕ್ಕದಲ್ಲಿನ ಜಾಗವನ್ನು ಕಿಕ್‌ಬೆಕ್ ರೂಪದಲ್ಲಿ ನೀಡಿದ್ದಾರೆ ಎಂಬ ಆರೋಪ ಇದೆ ಎಂದು ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹೇಳಿದರು

ಖಾಸಗಿ ಹೊಟೆಲ್ ನಡೆದ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು ಬೇನಾಮಿ ಆಸ್ತಿಗಳು, ಕಾಮಗಾರಿ ಮಾಡದೇ ಸರ್ಕಾರದ ಹಣ ಹೊಡೆದ ಸಾಕಷ್ಟು ಹಗರಣ ನಡೆದಿದೆ. ಐಆರ್‌ಬಿ ಕಟ್ಟಿಗೆ ಟೆಂಡರ್ ವಿಚಾರದಲ್ಲಿ ಯಾರ ವಿರುದ್ಧ ಎಫ್‌ಐಆರ್ ಆಗಿದೆ ಎಂಬುದನ್ನು ದಾಖಲೆ ಸಮೇತ ನೀಡಲಿ. ಅಲ್ಲಿನ ಕಟ್ಟಿಗೆಗಳು ಇವರದ್ದೆ ಮುಖಂಡರ ಡಿಪೋ ಸೇರಿದೆ. ಸಾಕಷ್ಟು ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ನಾವು ದಾಖಲೆ ಸಮೇತ ಚರ್ಚೆಗೆ ಬರಲು ಸಿದ್ಧರಿದ್ದೇವೆ.ಇತ್ತೀಚೆಗೆ ನಡೆದ ಗ್ಯಾಸ್ ಟ್ಯಾಂಕರ್ ಅಪಘಾತಕ್ಕೆ ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿ ಮತ್ತು ಶಾಸಕರ ನಿರ್ಲ್ಯಕ್ಷ್ಯ ಬಗ್ಗೆ ಪ್ರಶ್ನೆ ಮಾಡಿರುವುದು ಸತ್ಯ. ನಮ್ಮ ಕ್ಷೇತ್ರದಲ್ಲಿ ಅನ್ಯಾಯವಾದಾಗ, ವ್ಯವಸ್ಥೆ ಹದಗೆಟ್ಟಾಗ ಸ್ಥಳೀಯ ಶಾಸಕರನ್ನು, ಸಂಬAಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸುವುದು, ಎಚ್ಚರಿಸುವ ಕಾರ್ಯ ಮಾಡುವುದು ವಿರೋಧ ಪಕ್ಷದ ಕರ್ತವ್ಯ ಎಂದು ಸವಾಲೆಸೆದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸಿ ಜಿ ಹೆಗಡೆ ಮತ್ತು ಕಾರ್ಯಾಧ್ಯಕ್ಷ ಬಲೀಂದ್ರ ಗೌಡ ಮಾತನಾಡಿ, ಪ್ರಧಾನಿ ದೇವೆ ಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸನ್ಮಾನಿಸಿ, ಗೌರವಿಸಿದ್ದಾರೆ. ಅಂಥ ಧೀಮಂತ ವ್ಯಕ್ತಿತ್ವವುಳ್ಳ ದೇವೆ ಗೌಡರ ವಿರುದ್ಧ ಮಾತನಾಡುವ ಅರ್ಹತೆ ಈ ಮಂಡಲಾಧ್ಯಕ್ಷರಿಗೆ ಇಲ್ಲ. ಅವರು ಮತಿಹೀನರಾಗಿ ಇಂಥ ಹೇಳಿಕೆ ನೀಡಿರಬಹುದು. ಕ್ಷೇತ್ರ ಅಭಿವೃದ್ಧಿ ಬಗ್ಗೆ ಗಮನ ಹರಿಸುವ ಬದಲೂ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಂಭು ನಾಯ್ಕ, ಪಾಂಡು ಪಟಗಾರ, ಮಂಜು ಜೈನ್ , ಮೂರೂರು ಗ್ರಾಪಂ ಅಧ್ಯಕ್ಷ ರಾಘು ನಾಯ್ಕ, ಜೆಡಿಎಸ್ ಪ್ರಮುಖರಾದ ಮಹೇಂದ್ರ ನಾಯ್ಕ, ದತ್ತ ಪಟಗಾರ, ಸತೀಶ ಮಹಾಲೆ, ಶಶೀಧರ ಆಡುಗುಳಿ, ಅಬ್ದುಲ್ ದಮ್ಕಾರ್, ಶಿವರಾಮ ಮೂರೂರು, ಸುದರ್ಶನ ಶಾನಭಾಗ, ಮಂಜುನಾಥ ಗೌಡ, ಅಣ್ಣಪ್ಪ ನಾಯ್ಕ, ಸತೀಶ ಚಂದಾವರ, ಅಕ್ರಮ ಸಾಬ್, ಶರತ್ ನಾಯ್ಕ, ಚಂದ್ರಶೇಖರ ಪಾಲೇಕರ್ ಇತರರು ಇದ್ದರು

.

error: