May 13, 2024

Bhavana Tv

Its Your Channel

ವಿಜೃಂಭಣೆಯಿOದ ಸಂಪನ್ನಗೊOಡ ಕುಮಟಾ ಲಕ್ಷ್ಮೀವೆಂಕಟರಮಣ ರಥೋತ್ಸವ

ಕುಮಟಾ : ರಥಸಪ್ತಮಿ ಅಂಗವಾಗಿ ಲಕ್ಷ್ಮೀವೆಂಕಟರಮಣ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ವಿಜೃಂಭಣೆಯಿoದ ಸಂಪನ್ನಗೊoಡಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉಘೆ .. ಗೋವಿಂದ , ಉಘೆ .. ವೆಂಕಟ ರಮಣ ಎಂಬ ಜಯಘೋಷ ಕೂಗುತ್ತಾ ರಥವನ್ನು ಎಳೆದರು. ಶ್ರೀರಥದಲ್ಲಿ ವೆಂಕಟರಮಣ ಉತ್ಸವ ಮೂರ್ತಿಗೆ ಕೈಮುಗಿದು, ಶ್ರೀರಥಕ್ಕೆ ಬಾಳೆ ಹಣ್ಣು ಎಸೆದು ತಮ್ಮ ಭಕ್ತಿಭಾವ ಸಮರ್ಪಿಸಿದರು . ರಥೋತ್ಸವ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಥೋತ್ಸವ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆಗೂ ದೇವಸ್ಥಾನದಲ್ಲಿ ವಿಶೇಷ ಪೂಜೆಗಳಾದ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕುಂಕುಮಾರ್ಚನೆ, ಲಕ್ಷ್ಮೀವೆಂಕಟರಮಣ ಸ್ವಾಮಿ ಕಲ್ಯಾಣ ಮಹೋತ್ಸವ ನಡೆದು ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಯಿತು . ಉತ್ಸವಮೂರ್ತಿಗೆ ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ರಥಕ್ಕೆ ಸುಗಂಧರಾಜ, ಸೇವಂತಿಗೆ, ಚಂಡುಹೂವಿನಿAದ, ಪತ್ರೆ ಎಲೆಗಳಿಂದ ಮಾಡಿದ ದೊಡ್ಡ ಹಾರವನ್ನು ರಥಕ್ಕೆ ಕಟ್ಟಲಾಗಿತ್ತು. ರಥಕ್ಕೆ ಪಂಚ ಕಳಸ ಸ್ಥಾಪಿಸಲಾಗಿತ್ತು. ಉತ್ಸವ ಮೂರ್ತಿ ಯನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿಯ ನಂತರ ಮೆರವಣಿಗೆಯ ಮೂಲಕ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಸಿ.ಪಿ.ಐ. ತಿಮ್ಮಪ್ಪ ನಾಯ್ಕ ಮಾರ್ಗದರ್ಶ ನದಲ್ಲಿ ಪಿ.ಎಸ್.ಐ, ನವೀನ ಕುಮಾರ ನಾಯ್ಕ.ರವಿ ಗುಡ್ಡೆ ಹಾಗೂ ಅಪರಾಧ ವಿಭಾಗದ ಪಿ.ಎಸ್.ಐ.ಪದ್ಮಾವತಿ ಅವರ ತಂಡದವರಿAದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರು.

ವರದಿ: ನಟರಾಜ ಗದ್ದೆಮನೆ ಕುಮಟಾ

error: