May 12, 2024

Bhavana Tv

Its Your Channel

ಹೊಲನಗದ್ದೆ ಸಮುದ್ರ ತೀರದಲ್ಲಿ ಕೋಟಿ ಕಂಠ ಗಾಯನ

ಕುಮಟಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯಲ್ಲಿ ವಿಶಿಷ್ಟ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ವಿಭಿನ್ನವಾಗಿ ನಡೆಸಲಾಯಿತು.

ಮೀನುಗಾರರ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿರುವ ಹೊಲನಗದ್ದೆ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪಕ್ಕದಲ್ಲೇ ಇರುವ ಸಮುದ್ರ ತೀರಕ್ಕೆ ಕೊಂಡೊಯ್ದು ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಕಡಲ ತಡಿಯಲ್ಲಿ ಆಯೋಜಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಶಾಸಕ ದಿನಕರ ಕೆ ಶೆಟ್ಟಿ ಪಾತಿ ದೋಣಿಯಲ್ಲಿ ಕುಳಿತು ನಾಡಗೀತೆಗೆ ಧ್ವನಿ ಗೂಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕನ್ನಡ ಉಳಿಯಬೇಕಾದರೆ ನಾವು ಅದನ್ನು ಬಳಸಬೇಕು. ನಾಡು-ನುಡಿಯ ಅಭಿಮಾನ ನಮ್ಮೆಲ್ಲರಿಗಿರಲಿ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ದೇಶ-ಭಾಷೆಯ ಬಗ್ಗೆ ಅಭಿಮಾನ ಮೂಡಲು ಕಾರಣವಾಗುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಕುಮಟಾ ಕನ್ನಡ ಸಂಘದ ಸದಸ್ಯರಾದ ಈಶ್ವರ ಪಟಗಾರ ಗುಡೇಕೊಪ್ಪರವರು ಹೊಲನಗದ್ದೆ ಶಾಲೆಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡ ಶಾಲನ್ನು ಉಚಿತವಾಗಿ ನೀಡುವ ಮೂಲಕ ತಮ್ಮ ಕನ್ನಡಾಭಿಮಾನ ತೋರಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಲ್ ಭಟ್ಟ,ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ,ಉಪಾಧ್ಯಕ್ಷ
ಉದಯ ಭಟ್ಟ, ಸದಸ್ಯರಾದ ಈಶ್ವರ ಪಟಗಾರ ಗುಡೇಕೊಪ್ಪ, ಮಮತಾ ನಾಯ್ಕ,ಸುರೇಶ ಭಟ್ಟ,ರಾಘು ಗುನಗಾ,
ಹೊಲನಗದ್ದೆ ಗ್ರಾ.ಪಂ ಉಪಾಧ್ಯಕ್ಷೆ , ಸದಸ್ಯರು ಎಸ್.ಡಿ.ಎಮ್.ಸಿ. ಅಧ್ಯಕ್ಷ ಚಂದ್ರಹಾಸ ನಾಯ್ಕ , ಉಪಾಧ್ಯಕ್ಷ ಶಾಂತಿ
ಮುಕ್ರಿ,ಸದಸ್ಯರು, ಪಿ.ಡಿ.ಓ,ಸಿ.ಆರ್.ಪಿ. ಪ್ರದೀಪ ನಾಯಕ ಇನ್ನಿತರರು ಇದ್ದರು. ಮುಖ್ಯೋದ್ಯಾಪಕ ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ಸಂಘಟಿಸಿ, ನಿರೂಪಿಸಿದರು.

ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ

error: