May 12, 2024

Bhavana Tv

Its Your Channel

ಯಲ್ಲಾಪುರ ತಾಲೂಕ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಪೇಟ್ರೋಲ್-೧೦೦ ನಾಟೌಟ್ ಪ್ರತಿಭಟನೆ

ಯಲ್ಲಾಪುರ: ವಿಶ್ವದಲ್ಲಿಯೇ ಅತೀ ಹೆಚ್ಚು ಇಂಧನ ತೆರಿಗೆ ವಿಧಿಸಿದ ಪಟ್ಟಿಯಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದ್ದು, ಭಾರತದಲ್ಲಿ ಇಂಧನ ಮೇಲಿನ ತೆರಿಗೆ ಹೇಚ್ಚಿಸುತ್ತಿರುವುದು ಅವೈಜ್ಞಾನಿಕ ಮತ್ತು ಜನ ವಿರೋಧಿ ನೀತಿಯಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರ ನಾಯ್ಕ ಹೇಳಿದರು.

ಅವರು ಇಂದು ಯಲ್ಲಾಪುರ ತಾಲೂಕಿನ, ಕುಂದರಗಿ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಪೆಟ್ರೋಲ್-೧೦೦ ನಾಟೌಟ್, ಇಂಧನ ಬೆಲೆ ಏರಿಸಿರುವ ಕ್ರಮದ ಕುರಿತು ಪ್ರತಿಭಟನೆ ಜರುಗಿಸಿ ಮಾತನಾಡುತ್ತಿದ್ದರು.

ಮುಂದುವರೆದ ರಾಷ್ಟçಗಳಲ್ಲಿ ಯುನೈಟೆಡ್ ಸ್ಟೇಟ್‌ನಲ್ಲಿ ಶೇ. ೨೦, ಜಪಾನ್ ಶೇ. ೪೫, ಯುನೈಟೆಡ್ ಕಿಂಗಡಮ್ ಶೇ. ೬೨, ಇಟಲಿ ಮತ್ತು ಜರ್ಮನಿಯಲ್ಲಿ ಶೇ ೬೫ ರಷ್ಟು ತೆರಿಗೆ ಇದ್ದರೇ, ಭಾರತದಲ್ಲಿ ಶೇ. ೨೬೦ ರಷ್ಟು ತೆರಿಗೆ ವಿಧಿಸುತ್ತಿರುವುದು ಖೇದಕರ ಎಂದು ವಿಶ್ವದಲ್ಲಿಯೇ ಅತೀ ಹೇಚ್ಚು ಇಂಧನ ಬಳಕೆಯ ರಾಷ್ಟçದಲ್ಲಿ ಭಾರತವು ೩ ನೇ ರಾಷ್ಟçವಿದ್ದು, ಇಂದು ಭಾರತದಲ್ಲಿ ಸುಮಾರು ೨೧೧.೬ ಮಿಲಿಯನ್ ಟನ್ ತೈಲ ಪ್ರತಿ ವರ್ಷ ಬಳಕೆಯಾಗುತ್ತಿದೆ ಎಂದು ಅವರು ಹೇಳಿದರು. ಪೆಟ್ರೋಲ್ ಬೆಲೆ ಕಡಿಮೆ ಆಗುವರೆಗೂ ನಿರಂತರ ಹೋರಾಟ ಮುಂದುವರಿಸಲಾಗುವದು ಎಂದು ಅವರು ತಿಳಿಸಿದರು.

ಪ್ರತಿಭಟನೆಯ ಮುಂದಾಳತ್ವವವನ್ನು ಘಟಕ ಅಧ್ಯಕ್ಷ ವಾಸುದೇವ ಶೇಟ, ಜೋನ್ ಡೀಸೋಜ ಅವರ ನೇತ್ರತ್ವದಲ್ಲಿ ಜರುಗಿದ ಪ್ರಯಿಭಟನೆಯಲ್ಲಿ ಕಾರ್ಯದರ್ಶಿ ಫಕೀರ ಹರಿಜನ, ಉಪಾಧ್ಯಕ್ಷ ವಿಶ್ವಾಸ ನಾಯ್ಕ, ವಸಂತ ಭೋವಿವಡ್ಡರ್, ಯಮುನಾ ಸಿದ್ಧವಿ, ವಿನಾಯಕ ನಾಯ್ಕ, ರಾಮ ಪೂಜಾರಿ, ಶಿವರಾಮ ರೆಡ್ಡಿಮನೆ, ವಿನಾಯಕ ಮರಾಠಿ, ನಾಗೇಶ ಸಿದ್ಧಿ, ಶಂಕರ ಪಟಗಾರ, ವಾಸು ಜಟ್ಟಿ ನಾಯ್ಕ, ನಾರಾಯಣ ನಾಯ್ಕ ಮುಂತಾದವರು ಭಾಗವಹಿಸಿದ್ದರು.
error: