May 14, 2024

Bhavana Tv

Its Your Channel

ನನ್ನೊಂದಿಗೆ ಸ್ಪರ್ಧೆಗಿಳಿದವರು ಪ್ರತಿಸ್ಪರ್ಧಿಗಳಲ್ಲ, ಸಹ ಸ್ಪರ್ಧಿಗಳು- ಬಿ.ಎನ್.ವಾಸರೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ‘ ಸಾಹಿತ್ಯದ ಮನಸ್ಸುಗಳನ್ನು ಕೂಡಿಸುವ ಕಾರ್ಯ ಆಗಬೇಕು. ಶಾಲೆಗಳಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆ ಆಗುತ್ತಿದೆ. ಸಾಹಿತ್ಯಾಭಿರುಚಿ ಹೆಚ್ಚಿಸುವ, ಸಾಹಿತ್ಯ ಕೃತಿಗಳನ್ನು ರಚಿಸಿದವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಸಮಾಲೋಚನೆ ನಡೆಸಿ, ತಮಗಿತ್ತ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಐದು ವರ್ಷದ ಮೌನ, ನನ್ನ ಶ್ರಮ ನನ್ನ ಗೆಲುವಿಗೆ ಕಾರಣವಾಗಿದೆ. ಮುಂದಿನ ಐದು ವರ್ಷದ ಅವಧಿಯಲ್ಲೂ ಯಾವುದೇ ಮಾತು ಬಾರದಿರಲಿ ಎಂದ ಅವರು ಡಿಸೆಂಬರ್ ೨೩ ರಂದು ದಾಂಡೇಲಿಯಲ್ಲಿ ಹೊಣೆಗಾರಿಕೆ ಸ್ವೀಕಾರ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದೇನೆ ಎಂದರು.
ನಿಕಟ ಪೂರ್ವ ತಾಲ್ಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಮಾತನಾಡಿ, ತಾಲ್ಲೂಕಿನ ಕಸಾಪ ಅಧ್ಯಕ್ಷನಾಗಿ ನಾನು ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ನಾವು ಯಾವುದೇ ಹುದ್ದೆಯಲ್ಲಿರಲ್ಲಿ ಆ ಹುದ್ದೆಯನ್ನು ನಿರ್ವಹಿಸುವಲ್ಲಿ ಬದ್ಧತೆ ಇರಬೇಕು. ಮೊದಲು ಕೆಲವೇ ಜನರ ಪರಿಷತ್ತು ಆಗಿತ್ತು. ಅದನ್ನು ಜನರ ಪರಿಷತ ಆಗುವಲ್ಲಿ ಶ್ರಮಿಸಿದ್ದೇನೆ ತಾಲೂಕಿನ ಎಲ್ಲ ವರ್ಗದ ಜನರೊಡನೆ ಬೆರೆತು ಕನ್ನಡದ ಕೆಲಸ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಸೇವಾದಳ, ಸರ್ಕಾರಿ ನೌಕರರ ಸಂಘ, ಭಾರತ ಸೇವಾ ದಳ, ಕೇಂದ್ರ ಸಾಹಿತ್ಯ ವೇದಿಕೆ, ಕರ್ನಾಟಕ ಜರ್ನಲಿಸ್ಟ ಯೂನಿಯನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಭೀರಣ್ಣನಾಯಕ ಮೊಗಟಾ ವತಿಯಿಂದ ಜಿಲ್ಲಾಧ್ಯಕ್ಷ ವಾಸರೆ ಅವರನ್ನು ಸನ್ಮಾನಿಸಲಾಯಿತು.
ಸಮಾಲೋಚನಾ ಸಭೆಯಲ್ಲಿ ಅಜೀವ ಸದಸ್ಯರ ಅಭಿಪ್ರಾಯ ಪಡೆದು ತಾಲ್ಲೂಕು ಘಟಕದ ಅಧ್ಯಕ್ಷರ ಸ್ಥಾನಕ್ಕೆ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿಯವರ ಹೆಸರು ಹಾಗೂ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಸಣ್ಣಪ್ಪ ಭಾಗ್ವತ, ಸುಬ್ರಹ್ಮಣ್ಯ ಭಟ್ಟ, ಶಿವಲೀಲಾ ಹುಣಸಗಿ ಇವರ ಹೆಸರನ್ನು ಅಂತಿಮಗೊಳಿಸಲಾಯಿತು. ಇನ್ನೂ ಯಾರಾದರೂ ಆಕಾಂಕ್ಷಿಗಳಿದ್ದರೆ ಒಂದೆರಡು ದಿನಗಳಲ್ಲಿ ತಿಳಿಸುವಂತೆ ಸೂಚಿಸಲಾಯಿತು.
ವೇಣುಗೋಪಾಲ ಮದ್ಗುಣಿ ಸ್ವಾಗತಿಸಿದರು, ಸಂಜೀವಕುಮಾರ ಹೊಸ್ಕೇರಿ ಪ್ರಾಸ್ತಾವಿಕ ಮಾತನ್ನಾಡಿದರು. ದೇವಿದಾಸ (ಉಲ್ಲಾಸ) ಶಾನಭಾಗ ವಂದಿಸಿದರು, ಪತ್ರಕರ್ತ ನಾಗೇಶಕುಮಾರ ವಂದಿಸಿದರು.

error: