May 12, 2024

Bhavana Tv

Its Your Channel

ಯಲ್ಲಾಪುರದಲ್ಲಿ ಜ.೧ರಂದು ಕಾಲಚಕ್ರ ನಾಟಕ ಪ್ರದರ್ಶನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ರಂಗಸಮೂಹವು ಹೊಸ ಅಲೆಯ ನಾಟಕವನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸಿದ್ದು, ಈ ನಾಟಕ ಪ್ರಸ್ತುತ ಸಾಮಾಜಿಕ ಬದುಕಿನ ಸನ್ನಿವೇಶಗಳನ್ನು ಮತ್ತು ವೃದ್ಧಾಪ್ಯದ ಸನ್ನಿವೇಶಗಳನ್ನು ಅತ್ಯಂತ ಪ್ರಭಾವಪೂರ್ಣವಾಗಿ ಮೂಡಿಸುವಂತಿದೆ. ಇಂತಹ ಕಾಲಚಕ್ರವೆಂಬ ನಾಟಕದ ಪ್ರದರ್ಶನ ಜ.೧ ಶನಿವಾರದಂದು ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ದೇವಸ್ಥಾನದ ಆವಾರದ ಶ್ರೀಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ನಡೆಯಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.

ಯಲ್ಲಾಪುರ ಪಟ್ಟಣದ ಅಡಕೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ನಾಟಕದ ಕುರಿತಂತೆ ಮಾಹಿತಿ ನೀಡುತ್ತಿದ್ದರು.ನಮ್ಮ ಈ ಪ್ರದೇಶದಲ್ಲಿ ನಾಟಕಾಸಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಆಸಕ್ತರಿಗೆ ನಾಟಕ ವೀಕ್ಷಣೆಗೆ ಇದು ಅವಕಾಶ ಕಲ್ಪಿಸಿದೆ. ಕಲೆ-ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಬೇಕೆಂದು ವಿನಂತಿಸಿದರು.ಸAಘಟಕರ ಪರವಾಗಿ ಲೋಕನಾಥ ಗಾಂವ್ಕರ್ ಮಾತನಾಡಿ, ಈ ನಾಟಕ ಅಂದು ೬.೩೦ ಕ್ಕೆ ಪ್ರಾರಂಭಗೊಳ್ಳಲಿದೆ. ಸಮುದಾಯದ ಬೆಳವಣಿಗೆ ಹಿನ್ನೆಲೆಯನ್ನು ಅಳವಡಿಸಿಕೊಂಡು ಪ್ರಸ್ತುತ ಸನ್ನಿವೇಶದಲ್ಲಿ ಯುವಜನಾಂಗ ತಮ್ಮ ವೃದ್ಧ ತಂದೆ-ತಾಯAದಿರನ್ನು ದೂರೀಕರಿಸುವ ಸನ್ನಿವೇಶವನ್ನು ಅತ್ಯಂತ ಪ್ರಭಾವಪೂರ್ಣವಾಗಿ, ನೈಜತೆಯಿಂದ ನಾಟಕಕ್ಕೆ ಅಳವಡಿಸಲಾಗಿದೆ. ಹೊಸತನವೂ ನಾಟಕದಲ್ಲಿ ಹಾಸುಹೊಕ್ಕಾಗಿರುವುದರಿಂದ ಯುವಜನಾಂಗ ಕೂಡ ತಪ್ಪದೇ ಈ ನಾಟಕವನ್ನು ನೋಡುವಂತಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಜಿ.ಭಟ್ಟ ಶೀಗೇಪಾಲ, ಶಂಕರ ಭಟ್ಟ ತಾರೀಮಕ್ಕಿ, ಗಣಪತಿ ಬೋಳಗುಡ್ಡೆ, ಮಧುಕೇಶ್ವರ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

error: