May 1, 2024

Bhavana Tv

Its Your Channel

ಮಜ್ಜಿಗೆ ಹಳ್ಳದಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಗಿಡನೆಡುವ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಜೀವನ ವಿಕಾಸ ಟ್ರಸ್ಟ್ (ರಿ) ಯಲ್ಲಾಪುರ , ಹಾಗೂ ಯಲ್ಲಾಪುರ ಅರಣ್ಯ ವಿಭಾಗ ,ಗ್ರಾಮ ಪಂಚಾಯತ್ ಕುಂದರಗಿ,ಗ್ರಾಮ ಅರಣ್ಯಸಮಿತಿ ಉಚಗೇರಿ ಹಾಗೂ ಎಸ್.ಡಿ.ಎಮ್.ಸಿ ಸ.ಹಿ.ಪ್ರಾ.ಶಾಲೆ ಉಚಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ವೃಕ್ಷಾರೋಪಣ ಕಾರ್ಯಕ್ರಮವನ್ನು ಯಲ್ಲಾಪುರ ತಾಲ್ಲೂಕಿನ ಮಜ್ಜಿಗೆ ಹಳ್ಳ ಊರಿನಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ವಿಧಾನ ಪರಿಷತ್ ಶಾಸಕರು ಹಾಗೂ ಜೀವನ ವಿಕಾಸ ಟ್ರಸ್ಟ್ ನ ನಿರ್ವಾಹಕ ವಿಶ್ವಸ್ಥರಾದ ಶಾಂತಾರಾಮ ಸಿದ್ಧಿ ಅವರು ಗಿಡ ನೆಡುವ ಮೂಲಕ ಹಾಗೂ ಗಿಡಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿ ಗಿಡ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವವನ್ನು ಗಿಡ ನೆಡುವ ಮೂಲಕ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಸವಿತಾ ಹೆಗಡೆ ಅವರು ವಹಿಸಿದ್ದರು, ಕಾರ್ಯಕ್ರಮದಲ್ಲಿ ಕುಂದರಗಿ ಪಂಚಾಯಿತಿ ಉಪಾಧ್ಯಕ್ಷರಾದ ದಾಕ್ಲು ಪಾಟೀಲ, ಸದಸ್ಯರಾದ ಮಾಸ್ತಪ್ಪ ಮಡಿವಾಳ,ಉಚಗೇರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ಸಿ. ಕೆ .ರವಿ, ವಲಯ ಅರಣ್ಯಾಧಿಕಾರಿಯವರಾದ ಅಮಿತ್ ಚೌಹಾಣ್, ಜೀವನ ವಿಕಾಸ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀ ಸೋಮನಾಥ ಸಿದ್ಧಿ ಹಾಗೂ ಸ. ಹಿ. ಪ್ರಾ.ಶಾಲೆ ಉಚಗೇರಿ ಮುಖ್ಯೋಪಾಧ್ಯಾಯರಾದ ಆರ್. ಟಿ ಭಟ್ ಹಾಗೂ ಶಾಲೆಯ ಎಲ್ಲ ಶಿಕ್ಷಕವೃಂದ , ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.


error: