May 1, 2024

Bhavana Tv

Its Your Channel

ವಿಶ್ವದರ್ಶನ ಪ್ರೌಢಶಾಲೆಯ ವಿ.ಕೆ.ಗಾಂವಕರ ಸೇವಾ ನಿವೃತ್ತಿಯ ಬೀಳ್ಕೊಡುಗೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: 1993 ರಲ್ಲಿ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ ಪ್ರೌಢಶಾಲೆಯ ಪ್ರಾರಂಭದಿAದ ಇಲ್ಲಿಯವರೆಗೆ 30 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿಶ್ವೇಶ್ವರ ಕೆ ಗಾಂವ್ಕಾರ ತೇಲಂಗಾರ ಇವರನ್ನು ಹೃದಯಸ್ಪರ್ಶಿ ಕಾರ್ಯಕ್ರಮದ ಮೂಲಕ ಬೀಳ್ಗೊಳ್ಳಲಾಯಿತು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೊದಲ ಶಿಕ್ಷಕರು ಇವರೆಂಬುದು ವಿಶೇಷತೆಯಾಗಿದೆ. ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ವಿ ಕೆ ಗಾಂವ್ಕಾರವರಿಗೆ ಸ್ವಾಗತ ಕೋರಿ ಗುರುಗಳ ಪಾದಪೂಜೆಯನ್ನು ನಡೆಸಿದರು.ಅಲ್ಲದೇ ವಿದ್ಯಾರ್ಥಿಗಳಿಗೆ ನಿವೃತ್ತಿ ಹೊಂದುತ್ತಿರುವ ವಿ ಕೆ ಗಾಂವ್ಕಾರ ಅವರು ಜ್ಞಾನದ ಸಂಕೇತವಾದ ದೀಪವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಎಚ್ಚರಿಸಿದರು.ಅತ್ಯಂತ ಶಿಸ್ತು ಮತ್ತು ಸರಳ ವ್ಯಕ್ತಿತ್ವದ ವಿಶ್ವೇಶ್ವರ ಕೆ ಗಾಂವ್ಕಾರ ಅವರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇತರ ಗಣ್ಯರು ತಮ್ಮ ಅನಿಸಿಕೆಗಳು ಹಾಗೂ ಭಾವನೆಗಳನ್ನು ಹಂಚಿಕೊAಡರು.ಅತ್ಯAತ ಭಾವನಾತ್ಮಕ ಮತ್ತು ಹೃದಯಸ್ಪರ್ಶಿಯಾಗಿದ್ದ ಈ ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರವರು,ವಿಶ್ವದರ್ಶನ ಶಿಕ್ಷಣ ಸಂಸ್ಥೆಗಳ ವಿವಿಧ ಅಂಗಸAಸ್ಥೆಗಳ ಮುಖ್ಯಸ್ಥರುಗಳಾದ ಎಸ್ ಎಲ್ ಭಟ್, ಮುಕ್ತಾ ಶಂಕರ, ಪ್ರಸನ್ನ ಹೆಗಡೆಯವರು,ವಿಶ್ವದರ್ಶನ ನರ್ಸಿಂಗ್ ಸ್ಕೂಲ್ ಅಂಕೋಲಾದ ಗುರು ನಾಯಕ ಅವರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡಗುಂದಿಯ ಮುಖ್ಯಾಧ್ಯಾಪಕರಾದ ಗಣಪತಿ ಎಚ್ ಗೌಡ ಅವರು,ಸರ್ವೋದಯ ಪ್ರೌಢಶಾಲೆ ವಜ್ರಳ್ಳಿಯ ಮುಖ್ಯಾಧ್ಯಾಪಕರಾದ ಎಂ.ಕೆ.ಭಟ್ ಅವರು,ವಿ ಕೆ ಗಾಂವ್ಕಾರ್ ಅವರ ಗುರುಗಳೂ ನಿವೃತ್ತ ಶಿಕ್ಷಕರೂ ಆದ ಶ್ರೀ ಡಿ ಜಿ ಭಟ್ ದುಂಡಿಯವರು ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿವಿಧ ಅಂಗಸAಸ್ಥೆಗಳ ಶಿಕ್ಷಕರು,ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸಂಯೋಜಿಸಿದ್ದು ವಿದ್ಯಾರ್ಥಿಗಳಾದ ಕುಮಾರಿ ರಮ್ಯಾ ಮಡಿವಾಳ ನಿರ್ವಹಿಸಿದರೆ ಕುಮಾರಿ ವಿಜೇತಾ ಭಟ್ಟ ಸ್ವಾಗತಿಸಿ ಕುಮಾರಿ ಭಾರ್ಗವಿ ಭಟ್ಟ ವಂದಿಸಿದರು.

error: