May 2, 2024

Bhavana Tv

Its Your Channel

ಹೊನ್ನಾವರದಲ್ಲಿ ನಿಲ್ಲದ ಮಳೆ ಅಲ್ಲಲ್ಲಿ ಮನೆಗಳಿಗೆ ಹಾನಿ

ಹೊನ್ನಾವರ : ತಾಲೂಕಿನಲ್ಲಿ ಕಳೆದ ಎಂಟು ದಿನಗಳಿಂದ ಎಡಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದೆ.ರಾತ್ರಿ ಬುಧವಾರ ಸಂಜೆಯಿAದ ಪ್ರಾರಂಭವಾದ ಮಳೆ ತಾಲೂಕಿನಾದ್ಯಂತ ಜಿಟಿಜಿಟಿ ಎಂದು ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ತಾಲೂಕಿನ ಹಲವಾರು ಕಡೆ ಅನೇಕ ಮನೆಗಳಿಗೆ ಹಾನಿ ಉಂಟು ಮಾಡಿದೆ.

ಮಂಕಿ ಹತ್ತಿರದ ಚಿತ್ತಾರ ಭಾಗದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ಚಿತ್ತಾರ ಭಾಗದಲ್ಲಿ ಸಂಚಾರ ಸ್ಥಗಿತಗೊಂಡು ಸ್ಥಳೀಯರು ಪರದಾಡುವಂತಾಯಿತು.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳಿಗೆ ವಾಟ್ಸಪ್ ಸಂದೇಶವನ್ನು ರವಾನಿಸಿದರು ಕೂಡ ಕರೆಂಟ್ ಮತ್ತು ಮೊಬ್ಯಲ್ ನೆಟ್ವರ್ಕ್ ಎರಡು ಇಲ್ಲದ ಕಾರಣ ಹಲವಾರು ವಿದ್ಯಾರ್ಥಿಗಳಿಗೆ ಈ ಸಂದೇಶವು ಕೂಡ ತಲುಪಲಿಲ್ಲ. ತಕ್ಷಣ ಸ್ಥಳೀಯ ಕೆಲವು ಯುವಕರನ್ನು ವಾಟ್ಸಪ್ ಕರೆ ಮೂಲಕ ಸಂಪರ್ಕಿಸಿ ಇನ್ನೂ ಕೆಲವು ವಿದ್ಯಾರ್ಥಿಗಳ ಮನೆಗೆ ತೆರಳಿ ಸಹಾಯಕ್ಕೆ ಬಂದು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಬೈಕ್ ಮತ್ತು ಕಾರುಗಳಲ್ಲಿ ಬಸ್ಸಿಗೆ ಹೋಗಲು ಸಹಕರಿಸಿದರು.
ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿAದ ಚಿತ್ತಾರದಿಂದ ೯ ಕಿಲೋಮೀಟರ ದೂರದ ಪರೀಕ್ಷಾ ಕೇಂದ್ರಕ್ಕೆ ಸುಮಾರು ಹದಿನಾಲ್ಕು ಕಿಲೋಮೀಟರ್ ದೂರದ ಅಡಿಕೆಕುಳಿ, ಹಾಲಳ್ಳಿ, ಸಂಪೊಳ್ಳಿ, ಹಡಿಕಲ್ ಮುಂಡಾರ ಭಾಗದಿಂದ ಮಂಕಿ ಪರೀಕ್ಷಾ ಕೇಂದ್ರಕ್ಕೆ ಬರಬೇಕಾದ ೩೬ ವಿದ್ಯಾರ್ಥಿಗಳಿಗೆ ತುಂಬಾ ಪ್ರಯಾಸದಾಯಕ ವಾಯಿತು. ಸ್ಥಳೀಯ ಯುವಕರು ಪೋಷಕರ ವಿದ್ಯಾರ್ಥಿಗಳು ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪುವಲ್ಲಿ ಯಶಸ್ವಿಯಾದರು

ಮರ ಬಿದ್ದ ರಬಸಕ್ಕೆ ವಿದ್ಯುತ್ ಸಂಪರ್ಕವು ಕಡಿತ ಉಂಟಾಗಿದೆ. ವಿದ್ಯುತ್ ಕಡಿತಗೊಂಡರೆ ಬಿ ಎಸ್ ಎನ್ ಎಲ್ ಮೊಬ್ಯಲ್ ಟವರ್ ಕೂಡ ತನ್ನ ಕಾರ್ಯ ನಿಲ್ಲಿಸುವುದರಿಂದ ಮೊಬ್ಯೆಲ್ ನೆಟವರ್ಕ ಇಲ್ಲದೆ ಜನರು ಪರದಾಡುವಂತಾಯಿತು. ್ಲ ಏನೇ ಸಮಸ್ಯೆ ಉಂಟಾದರು ಕೂಡ ಸಂಬAಧ ಪಟ್ಟವರಿಗೆ ತಿಳಿಸಲಾಗದ ಪರಿಸ್ಥಿತಿ ಇದೆ. ನೆಟ್ವರ್ಕ್ ಇಲ್ಲದ ಸಮಯದಲ್ಲಿ ಯಾರಿಗಾದರೂ ಅನಾರೋಗ್ಯ, ಅಪಘಾತ ನಡೆದರೆ ನೆಟ್ವರ್ಕ್ ಸಮಸ್ಯೆಯಿಂದ ಏನು ಮಾಡಲಾಗದೆ ಕೈ ಕಟ್ಟಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಗಳಿಗೆ ಹಾನಿ
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಹಲವು ಮನೆಗಳಿಗೆ ತೊಂದೆ ಉಂಟಾಗಿದೆ. ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಶಂಕ್ರುಕೇರಿಯಲ್ಲಿ ಗಣಪಿ ಕೃಷ್ಣ ಗೌಡ ಇವರ ಮನೆಯ ಮೇಲ್ಚಾವಣೆ ಗಾಳಿಗೆ ಹಾರಿ ಹೋಗಿ ಹಾನಿ ಉಂಟಾಗಿದೆ. ವಿಜಯ ರಮಾಕಾಂತ ಹಳದಿಪುರ ಇವರ ಮನೆಗೆ ಮಳೆ ಗಾಳಿಯಿಂದ ಗೋಡೆ ಕುಸಿದು ಬಿದ್ದು ಹಾನಿ ಉಂಟಾಗಿದೆ.
ಸಾಲ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಕಾನಕ್ಕಿಯ ನಾರಾಯಣ ಹರಿಯಾ ಮರಾಠಿ ಇವರ ಮನೆಯ ಮೇಲ್ಚಾವಣೆ ಕುಸಿದು ಹಾನಿ ಉಂಟಾಗಿದೆ.
ಮಾಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಕುಚ್ಚೋಡಿಯ ಇಸ್ಮಾಯಿಲ್ ಖಾನ್ ಮನೆಯ ಹಿಂಬದಿಯ ಗೋಡೆ ಕುಸಿದು ಹಾನಿ ಉಂಟಾಗಿದೆ.
ಕಡತೋಕ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಬ್ಲೆಕೊಪ್ಪ ಕುಪ್ಪು ರಾಮ ಮುಕ್ರಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ.
ಹಾನಿ ಉಂಟಾದ ಪ್ರದೇಶಕ್ಕೆ ಆ ಭಾಗದ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ ಪಿಡಿಒ, ಅಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು.
ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ

error: