April 30, 2024

Bhavana Tv

Its Your Channel

ಅಳ್ಳಂಕಿಯ ಸ್ಪಂದನ ಸಮಾಜ ಸೇವಾ ಬಳಗದಿಂದ ಹೆರಂಗಡಿ ಗ್ರಾಮದ ನಿರ್ಗತಿಕ ಬಡಕುಟುಂಬಗಳಿಗೆ ದಿನಸಿವಸ್ತು ಮತ್ತು ತರಕಾರಿ ವಿತರಣೆ

ಹೆರಂಗಡಿ ಗ್ರಾಮದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಜೀವನ ನಿರ್ವಹಣೆಗಾಗಿ ತೊಂದರೆ ಪಡುತ್ತಿರುವವರಿಗೆ ನೆರವು ನೀಡಲು ಅಧ್ಯಕ್ಷ ಚಂದ್ರಕಾoತ ಕೊಚರೇಕರ ನೇತೃತ್ವದಲ್ಲಿ ಶನಿವಾರ ಹೆರಂಗಡಿ ಗ್ರಾಮದ ಹಲವು ನಿರ್ಗತಿಕ ಬಡ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ವಸ್ತು ಮತ್ತು ತರಕಾರಿಯನ್ನು ಉಚಿತವಾಗಿ ವಿತರಿಸಿ ಲಾಕ್ ಡೌನ್ ನಿಂದಾಗಿ ಎದುರಾಗಬಹುದಾದ ತೊಂದರೆಗಳನ್ನು ಧೈರ್ಯದಿಂದ ನಿಭಾಯಿಸಲು ಮಾನಸಿಕವಾಗಿ ಆತ್ಮಬಲ ಹೆಚ್ಚಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದೆ. ಜನತೆ ಕೆಲವು ತುರ್ತು ಅಗತ್ಯ ಸಂಧರ್ಭ ಹೊರತು ಪಡಿಸಿ ಲಾಕ್ ಡೌನ್ ಅವಧಿಯಲ್ಲಿ ಮನೆಯಿಂದ ಹೊರ ಹೋಗದೆ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಿ ಜನರು ಅವರವರ ಆರೋಗ್ಯ ಮತ್ತು ಜೀವವನ್ನು ರಕ್ಷಿಸಿಕೊಳ್ಳಲು ಸಂಕಲ್ಪ ಮಾಡಬೇಕಾಗಿದೆ. ನಮಗಾಗಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ಆರೋಗ್ಯ ಇಲಾಖೆ , ಪೋಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಗ್ರಾಮೀಣ ಯುವಕರು ಮನೆಯಲ್ಲಿ ಬೇಸರ ಬರುತ್ತದೆ ಎಂದು ಅನಗತ್ಯವಾಗಿ ಓಡಾಡುವುದನ್ನು ಮಾಡಬಾರದು , ರಸ್ತೆಗಳಲ್ಲಿ ಗುಂಪು ಗುಂಪಾಗಿನಿoತು ಚರ್ಚಿಸುವುದು ಮತ್ತು ಕ್ರಿಕೆಟ್ ನಂತಹ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಕೊಂಡು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವದು ಕೂಡ ಸರಿಯಲ್ಲವೆಂದು ಬಿತ್ತಿಪತ್ರಗಳ ಮೂಲಕ ಮನೆ ಮನೆಗೆ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಸಹ ಸ್ಥಳೀಯ ಸ್ಪಂದನ ಬಳಗಮಾಡುತ್ತಿದೆ.

ಲಾಕ್ ಡೌನ್ ಪೂರ್ವ ಹಲವಾರು ಗ್ರಾಮಗಳಲ್ಲಿ ಸ್ಪಂದನ ಬಳಗದ ಪದಾಧಿಕಾರಿಗಳು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಳೊoದಿಗೆ ಸೇರಿ ಕೊರೊನಾ ಮತ್ತು ಮಂಗನ ಕಾಯಿಲೆ ಬಗ್ಗೆ ಭಯಬೇಡ ಮುನ್ನೆಚ್ಚರಿಕೆ ಇರಲಿ ಎನ್ನುವ ಅಭಿಯಾನವನ್ನು ಆರಂಭಿಸಿ ಹಲವು ಜನಜಾಗೃತಿ ಶಿಬಿರಗಳನ್ನು ನಡೆಸಿ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.ನಿರ್ಗತಿಕರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಅತ್ಯಂತ ಬಡಕುಟುಂಬಗಳಿಗೆ ಅಗತ್ಯವಿರುವ ದಿನಸಿವಸ್ತುಗಳನ್ನು ಮತ್ತು ತರಕಾರಿ ವಿತರಣೆಮಾಡುವ ಸ್ಪಂದನ ಸಮಾಜ ಸೇವಾ ಬಳಗದ ಕಾರ್ಯವನ್ನು ಹೆರಂಗಡಿ ಗ್ರಾಮ ಪಂಚಾಯಿತ ಪಿ.ಡಿ.ಓ. ಉದಯ ಬಾಂದೇಕರ ಇಂದು ಅಳ್ಳಂಕಿಯಲ್ಲಿ ಫಲಾನುಭವಿಗಳಿಗೆ ದಿನಸಿ ಮತ್ತು ತರಕಾರಿ ಕಿಟ್ಟನ್ನುವಿತರಣೆ ಮಾಡುವ ಮೂಲಕ ಸಾಂಕೇತಿಕವಾಗಿ ಉಧ್ಘಾಟಿಸಿದರು. ಸ್ಪಂದನದ ಅಧ್ಯಕ್ಷ ಚಂದ್ರಕಾoತ ಕೊಚರೇಕರ, ಪದಾಧಿಕಾರಿಗಳಾದ ಎಂ. ಟಿ. ನಾಯ್ಕ, ಮಾದೇವ ಎಂ. ಗೌಡ, ಸಂತೋಷ ನಾಯ್ಕ,,ನಾರಾಯಣ ನಾಯ್ಕ, ರಾಮಕೃಷ್ಣ ಹೆಗಡೆ, ಸಿಸ್ಟರ್ ಸರಿತಾ ಪಿಂಟೋ, ಕಾರ್ಯದರ್ಶಿ ಜಿ. ಟಿ. ಹಳ್ಳೇರ ನೇತೃತ್ವದಲ್ಲಿ ನಾಮದೇವ ಅಂಕೊಲೇಕರ, ಜೋನಿ ಫರ್ನಾಂಡಿಸ್. ಅಸ್ಫಾಕ್ ಶೇಖ್, ವೀಣಾ ನಾಯ್ಕ, ಎಸ್ ಪ್ರಾನ್ಸ್ ಇನ್ನಿತರರು ದಿನಸಿ ಮತ್ತು ತರಕಾರಿಯನ್ನು ಉಚಿತವಾಗಿ ಗ್ರಾಮದ ಎಲ್ಲ ಫಲಾನುಭವಿಗಳಿಗೆ ತಲುಪಿಸಿ ನೆರವಾದರು.ಗ್ರಾ.ಪಂ.ಸಿಬ್ಬoದಿ ನಾಗರಾಜ್ ಗೌಡ ಉಪಸ್ಥಿತರಿದ್ದರು.

error: