April 30, 2024

Bhavana Tv

Its Your Channel

ನದಿಯ ಉಪ್ಪು ನೀರು ನುಗ್ಗಿ ಅಪಾರ ಹಾನಿ, ರೈತರ ಆತಂಕ, ಸ್ಥಳಕ್ಕೆ ಸೂರಜ್ ನಯ್ಕ ಸೋನಿ

ಕುಮಟಾ: ಹೊನ್ನಾವರ ತಾಲೂಕಿನ ಕಡತೋಕ ಗ್ರಾ.ಪಂ ವ್ಯಾಪ್ತಿಯ ಗುಡ್ಡಿನಕಟ್ಟು ಗ್ರಾಮದ ಸುಮಾರು ೨೦೦ ಎಕರೆಗಳಿಗಿಂತೂ ಅಧಿಕ ಕೃಷಿ ಜಮೀನುಗಳಿಗೆ ನದಿಯ ಉಪ್ಪು ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಹೇಗೆ ನಡೆಸುವುದು ಎಂಬ ಆತಂಕ ಇಲ್ಲಿನ ರೈತರನ್ನು ಕಾಡುತ್ತಿದೆ.

ಕಡತೋಕಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೂರಾರು ಎಕರೆ ಕೃಷಿ ಭೂಮಿಯಿದ್ದು, ಇಲ್ಲಿನ ಜನರು ಜೀವನಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಭತ್ತದ ಜತೆಗೆ ತೆಂಗು, ಅಡಿಕೆ, ಬಾಳೆ ಸೇರಿದಂತೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನೀರಿಗಾಗಿ ಮಳೆ ಮತ್ತು ಚಂದಾವರದಿAದ ಬಡಗಣಿ ಮೂಲಕ ಹರಿಯುವ ನದಿಯನ್ನು ನಂಬಿದ್ದಾರೆ. ಈ ನದಿಗೆ ಒಟ್ಟೂ ೬ ಕಿಂಡಿ ಆಣೆಕಟ್ಟುಗಳಿದ್ದು, ಇವುಗಳಿಗೆ ಹಲಗೆ ಹಾಗೂ ಸೈಡ್ ಕಾಂಕ್ರಿಟ್ ವಾಲ್ ಇಲ್ಲದೇ ಉಪ್ಪು ನೀರು ಕೃಷಿ ಭೂಮಿಗೆ ಒಳನುಗ್ಗುತ್ತದೆ. ಇದಕ್ಕೆ ಶಾಶ್ವತ ಬಂಡ್ ನಿರ್ಮಾಣ ಮಾಡುವ ಮೂಲಕ ಇಲ್ಲಿನ ಕೃಷಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯರ ಒತ್ತಾಯದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾಧ್ಯಮದವರ ಜೊತೆ ಮಾತನಾಡಿ, ಬಡಗಣಿ ನದಿಗೆ ವ್ಯವಸ್ಥಿತವಾಗಿ ಖಾರ್‌ಲ್ಯಾಂಡ್ ಬಂಡ್ ನಿರ್ಮಾಣ ಮಾಡದ ಪರಿಣಾಮ ಸುಮಾರು ೨೫೦ ರಿಂದ ೩೦೦ ಎಕರೆ ಭತ್ತದ ಗದ್ದೆಗೆ ಉಪ್ಪು ನೀರು ನುಗ್ಗಿ ಹಾನಿಯಾಗಿದೆ. ಪೇಟೆ ಕಟ್ಟಿಗೆ ಪಿಚ್ಚಿಂಗ್ ಹಾಗೂ ಬಂಡ್ ನಿರ್ಮಾಣ ಮಾಡದ ಕಾರಣ ಈ ರೀತಿ ಉಂಟಾಗಿದೆ. ಸ್ಥಳೀಯರು ಉಪ್ಪು ನೀರು ಕೃಷಿ ಭೂಮಿಗೆ ಒಳನುಗ್ಗಿದೆ ಎಂದು ನನ್ನ ಗಮನಕ್ಕೆ ತಂದ ನಂತರ ಸ್ಥಳಕ್ಕೆ ಆಗಮಿಸಿದ್ದೇನೆ. ಈ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಉಪ್ಪು ನೀರು ನುಗ್ಗಿದ ಪರಿಣಾಮ ರ‍್ನಾಲ್ಕು ವರ್ಷಗಳ ಕಾಲ ಬೆಳೆ ಬೆಳೆಯರು ಸಾಧ್ಯವಿಲ್ಲ. ಪೇಟೆಕಟ್ಟಿಗೆ ತಡೆಗೋಡೆ ಮತ್ತು ಬಂಡ್ ನಿರ್ಮಾಣ ಮಾಡಲು ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ, ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದರು.

     ಈ ಸಂದರ್ಭದಲ್ಲಿ ಕಡತೋಕಾ ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೌಡ, ಸೇರಿದಂತೆ ರೈತರು ಉಪಸ್ಥಿತರಿದ್ದರು.
error: