April 26, 2024

Bhavana Tv

Its Your Channel

ವಿವಿಧ ಸಂಘಟನೆಗಳಿOದ ಕಾಸರಕೋಡ ಬಂದರು ನಿರ್ಮಾಣ ಯೋಜನೆ ಕೈಬಿಡುವಂತೆ ವಿನೂತನ ಮಾದರಿಯ ಪ್ರತಿಭಟನೆ

ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಕಾಸರಕೋಡ ಗ್ರಾಮದ ಹತ್ತಕ್ಕೂ ಹೆಚ್ಚು ಸಂಘಟನೆಗಳು, ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ನೂರಾರು ಸಂಖ್ಯೆಯ ಮಹಿಳೆಯರು ಮಕ್ಕಳು ಸಾರ್ವಜನಿಕರು, ಇಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾAತ ಕೊಚರೇಕರ ರವರ ನೇತೃತ್ವದಲ್ಲಿ ಇಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶ್ರೀ ಬ್ರಜೇಶಕುಮಾರ್ IಈS. ರವರನ್ನು ಭೇಟಿ ಮಾಡಿ ಕಾಸರಕೋಡಿನ ವಾಣಿಜ್ಯ ಬಂದರು ಕಾಮಗಾರಿ ಯೋಜನೆಯನ್ನು ಕೈಬಿಡುವಂತೆ ವಿನೂತನ ಮಾದರಿಯ ಫಲಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸ್ವಾಗತಿಸಿ, ೨೫ಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಿ ಅಭಿವೃದ್ಧಿಯ ಹೆಸರಿನಲ್ಲಿ ಶುದ್ಧ ಪರಿಸರವನ್ನು ಹಾಳು ಮಾಡುವ, ಮೀನುಗಾರರ ಬದುಕನ್ನು ಹೊಸಕಿಹಾಕುವ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರುವ ಪ್ರಯತ್ನಗಳು ಆಗುತ್ತಿದೆ. ಇದು ಸರಿಯಲ್ಲ ಎನ್ನುವುದನ್ನು ಜಾತಾ ಮೂಲಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬ್ರಜೇಶಕುಮಾರ್ ಅವರ ಗಮನಸೆಳೆದ ವಿದ್ಯಮಾನ ಇಂದು ಸಂಜೆ ಕಾಸರಕೋಡ ಇಕೋ ಬೀಚ್ ಹತ್ತಿರ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ನಡೆಯಿತು . ಮನವಿ ನೀಡುವ ನಿಯೋಗದಲ್ಲಿ ಚಂದ್ರಕಾAತ ಕೊಚರೇಕರ,ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತ, ಗಣಪತಿ ತಾಂಡೇಲ, ಜಗದೀಶ್ ತಾಂಡೇಲ್, ರಾಜೇಶ್ ತಾಂಡೇಲ್, ವಿವನ್ ಫರ್ನಾಂಡಿಸ್, ಅಹ್ಮದ್ ಕೋಯಾ,ರೇಣುಕಾ ತಾಂಡೇಲ, ರೇಣುಕಾ ಗಣಪತಿ ತಾಂಡೇಲ, ಪ್ರೀತಿ ತಾಂಡೇಲ್, ಸೇರಿದಂತೆ ನೂರಾರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

error: