April 27, 2024

Bhavana Tv

Its Your Channel

ಜೀವಾತ್ಮ ಮತ್ತು ಪ್ರಕೃತಿ ಒಂದಾಗುವ ಸಾಧನವೇ ಯೋಗ- ಡಾ.ಸುಮಾ ಭಟ್ಟ

ಹೊನ್ನಾವರ: ಶ್ರೀಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ವಿಶ್ವಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊನ್ನಾವರದ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಸುಮಾ ಭಟ್ಟ ರವರು ಮಾತನಾಡಿ ಆಯುರ್ವೇದ ಮತ್ತು ಯೋಗಕ್ಕೆ ನಿಕಟ ಸಂಬAಧವಿದೆ ಪ್ರಕೃತಿಯಂತೆ ನಮ್ಮ ಶರೀರವು ಪಂಚ ಭೂತಗಳಿಂದ ನಿರ್ಮಾಣವಾಗಿದೆ ಜೀವಾತ್ಮ ಮತ್ತು ಪರಮಾತ್ಮ ಹಾಗೂ ಜೀವಾತ್ಮ ಮತ್ತು ಪ್ರಕೃತಿ ಒಂದಾಗುವ ಸಾಧನವೇ ಯೋಗ.
ಆದಿ ಯೋಗಿಯ ಹಠ ನಮ್ಮಲ್ಲಿ ಇರಬೇಕು ಯಾರು ಮನಸ್ಸನ್ನು ನಿಗ್ರಹಿಸುವರೋ ಅವರು ಜೀವನದಲ್ಲಿ ಮುಂದೆ ಬರುತ್ತಾರೆ ಸಾತ್ವಿಕರಜಸ್ಸು ಮತ್ತು ತಾಮಸ ಗುಣಗಳಲ್ಲಿ ಸಾತ್ವಿಕತೆಯ ಚಿಂತನೆ ಬದುಕನ್ನು ನಿರ್ಮಲಗೊಳಸುತ್ತದೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಧಾರಣ ಶಕ್ತಿಯ ಹೆಚ್ಚಳಕ್ಕೆ ಪ್ರಾಣಾಯಾಮ ಮತ್ತು ಮುದ್ರೆಗಳು ಬಹು ಪರಿಣಾಮಕಾರಿ ಎಂದು ತಿಳಿಸಿ 3 ಮುಖ್ಯ ಮುದ್ರೆಗಳನ್ನು ತಿಳಿಸಿಕೊಟ್ಟು ಇವುಗಳನ್ನು ರೂಡಿಸಿಕೊಂಡಲ್ಲಿ ವಿದ್ಯಾರ್ಥಿಗಳು ಜ್ಞಾನಸಂಗ್ರಹ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಾಧ್ಯಾಪಕರಾದ ಎಲ್. ಎಮ್. ಹೆಗಡೆಯವರು ಮಾತನಾಡಿ ಯೋಗ ಪ್ರಾಣಾಯಾಮ ನಡಿಗೆಯಿಂದ ಶರೀರ ಮತ್ತು ಮನಸ್ಸು ಸದೃಡಗೊಳ್ಳುತ್ತದೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕುವiಟಾ ಕಮಲಾಬಾಳಿಗ ಪ್ರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕುಮಾರಿ ನಿರ್ಮಲಾ ಹಾಗೂ ಕುಮಾರಿ ಸುಷ್ಮಾರವರು ಯೋಗ ಪ್ರದರ್ಶನ ನೀಡಿದರು. ಸೀಮಾ ಭಟ್ ಸ್ವಾಗತಿಸಿದರು. ವಿಶ್ವನಾಥ ನಾಯ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಕವಿತಾ ಪಿ ನಾಯ್ಕ ವಂದಿಸಿದರು. ಮುಕ್ತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

error: