May 15, 2024

Bhavana Tv

Its Your Channel

ಪೊಲೀಸ್ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 34 ಮಂದಿಗೆ ಪಾಸಿಟಿವ್..?

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಡೆಡ್ಲಿ ಕಿಲ್ಲರ್‌ ಕೊರೋನಾ ತನ್ನ ಅಟ್ಟ ಹಾಸ ಮುಂದುವರೆಸಿದ್ದು ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 34 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎನ್ನಲಾದೆ.

ಭಟ್ಕಳದಲ್ಲಿ 16, ಶಿರಸಿಯಲ್ಲಿ 6, ಹೊನ್ನಾವರದ 5, ಅಂಕೋಲಾದ 6 ಹಾಗೂ ದಾಂಡೇಲಿಯ ಓರ್ವನಲ್ಲಿ ಕೊರೋನಾ ದೃಢಪಟ್ಟಿದೆ ಎನ್ನಲಾಗಿದ್ದು ಸಂಜೆಯ ಹೆಲ್ತ್ ಬುಲೆಟಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಅಂಕೋಲಾ ಪೋಲಿಸ್ ಸಿಬ್ಬಂದಿಗೆ ಅಗ್ರಗೋಣದ ಸೋಂಕಿತನ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದ್ದು, ಈಗಾಗಲೇ ಪೊಲೀಸ್ ಸಿಬ್ಬಂದಿ ಠಾಣೆಯಲ್ಲಿ ಕೆಲವರ ಸಂಪರ್ಕಕ್ಕೂ ಬಂದಿರೋದಾಗಿ ಹೇಳಲಾಗಿದ್ದು, ಈ ಕಾರಣಕ್ಕೆ ಅಂಕೋಲ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಒಟ್ಟಾರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಡೆಡ್ಲಿ ಕೊರೋನಾ ತನ್ನ ಆರ್ಭಟವನ್ನು ಮುಂದುವರೆಸುತ್ತಿದ್ದು ಜಿಲ್ಲೆಯ ಜನತೆಯನ್ನ ಬೆಚ್ಚಿಬಿಳಿಸುತ್ತಿದೆ

error: