April 29, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವು ಕರೋನಾರ್ಭಟ ಮುಂದುವರೆದಿದ್ದು, ೩೫ ಜನರಿಗೆ ಫಾಸಿಟಿವ್ ವರದಿಯಾಗಿದೆ.

ಭಟ್ಕಳ- ೧೭ , ಕಾರವಾರ -೬ ,ಕುಮಟಾ -೨ ,ಜೋಯಿಡಾ-೧ ಹಳಿಯಾಳ -೩ ,ಹೊನ್ನಾವರ -೨ ,ಶಿರಸಿ -೨ ,ಮುಂಡಗೋಡು -೨ ಪ್ರಕರಣಗಳು ವರದಿಯಾಗುವ ಮೂಲಕ ಕರೋನಾ ಓಟ ಜಿಲ್ಲೆಯಲ್ಲಿ ಮುಂದುವರೆದಿದೆ.

ಭಟ್ಕಳದಲ್ಲಿ ಕರೋನಾ ಸೊಂಕು ಪ್ರಾಥಮಿಕ ಸಂಪರ್ಕ ಹೊಂದಿದ ಹತ್ತು ಜನರಿಗೆ, ದುಬೈ ನಿಂದ ಬಂದ ಮೂರು ಜನ, ಮಹರಾಷ್ಟ್ರದ ಠಾಣೆ ಯಿಂದ ಬಂದ ೩೨ ವರ್ಷದ ಮಹಿಳೆ, ಪುಣೆ ಯಿಂದ ಬಂದ ೨೪ ವರ್ಷದ ಯುವಕ ಪಿ.-೧೭೦೧೭ ಸಂಪರ್ಕ ಹೊಂದಿದ ಇಬ್ಬರಿಗೆ ,ಐ.ಎಲ್.ಐ ಸೊಂಕು ಲಕ್ಷಣ ಹೊಂದಿದ ಎರಡು ಜನರಿಗೆ ಸೊಂಕು ದೃಡವಾಗಿದೆ.

ಕಾರವಾರದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ ಅಂಕೋಲ ದ ೬೮ ವರ್ಷದ ವೃದ್ಧೆ, ಇಬ್ಬರು ಪುರುಷರು, ಬೆಂಗಳೂರಿನಿAದ ಬಂದ ಚಂಡಿಯಾದ ೫೩ ವರ್ಷದ ಪುರುಷ ,ತೋಡೂರಿನ ನಿವಾಸಿ ೨೦ ವರ್ಷದ ಮಹಿಳೆ, ಗೋವಾ ದಿಂದ ಬಂದ ಕಡವಾಡದ ೪೬ ವರ್ಷದ ಪುರುಷ ನಿಗೆ ಸೊಂಕು ಪತ್ತೆಯಾಗಿದೆ

ಕುಮಟಾದ ಸ್ಥಿತಿ ಇದಕ್ಕೂ ಭಿನ್ನವಾಗಿಲ್ಲ. ಸಂಪರ್ಕ ಹೊಂದಿದ ಕುಮಟಾದ ೪೨ ವರ್ಷದ ಪುರುಷ ,ಮುಂಬೈ ನಿಂದ ಬಂದ ಕುಮಟಾದ ೬೨ ವರ್ಷದ ವೃದ್ಧನಿಗೆ ಸೊಂಕು ಪತ್ತೆಯಾಗಿದೆ.

ಜೊಯಿಡಾದಲ್ಲಿ ಬೆಂಗಳೂರಿನಿAದ ಜೋಯಿಡಾದ ನ್ಯೂ ಟೌನ್ ಷಿಪ್ ಗೆ ಬಂದ ೨೦ ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.
ಹಳಿಯಾಳ ತಾಲೂಕಿನಲ್ಲಿ ಮುಂಬೈ ನಿಂದ ಬಂದ ಬಾಲಶಟ್ಟಿ ಕೊಪ್ಪದ ೧೨ ಮತ್ತು ೭ ವರ್ಷದ ಬಾಲಕಿಗೆ ಸೊಂಕು,ಜೊತೆಗೆ ದ್ವಿತೀಯ ಸಂಪರ್ಕ ಹೊಂದಿದ ಅಲೈಡ್ ಏರಿಯಾ ದಾಂಡೇಲಿ ಯ ೨೮ ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ಹೊನ್ನಾವರದಲ್ಲಿ ಮಹಾ ನಂಟು ಇನ್ನಷ್ಟು ಸಂಕಷ್ಟ ತಂದಿದ್ದು ಮಹಾ ರಾಷ್ಟ್ರ ದಿಂದ ಬಂದ ಕರ್ಕಿ ಗ್ರಾಮದ ೪೬ ವರ್ಷದ ಪುರುಷ, ಹೊರ ರಾಜ್ಯ ದಿಂದ ಬಂದ ಬಂದ ಐ.ಆರ್.ಬಿ ಟೋಲ್ ನ ೩೩ ವರ್ಷದ ಪುರುಷನಿಗೆ ಪಾಸಿಟಿವ್ ಬರುವ ಮೂಲಕ ನಿಧಾನಗತಿಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಶಿರಸಿಯಲ್ಲಿ ಸಂಪರ್ಕ ಹೊಂದಿದ ಗಣೇಶ ನಗರದ ೪೫ ವರ್ಷದ ಪುರುಷ, ದುಬೈ ನಿಂದ ಬಂದ ಮಾರಿಕಾಂಬಾ ನಗರದ ೩೬ ವರ್ಷದ ಪುರುಷನಿಗೂ ಪಾಸಿಟಿವ್ ಬಂದಿದೆ.
ಕೊರೊನಾ ಮಹಾಮಾರಿಯಿಂದ ಶಿರಸಿಯಲ್ಲಿ ಮೊದಲ ಸಾವು ಸಂಭವಿಸಿದ್ದು, ಸೋಮವಾರ ಮುಂಜಾನೆ ದೃಢವಾಗಿದ್ದ ತಾಲೂಕಿನ ಬಾಳಗಾರಿನ ವ್ಯಕ್ತಿ ಕೊವಿಡ್ ನಿಂದ ಕಾರವಾರದಲ್ಲಿ ಮೃತಪಟ್ಟಿದ್ದಾರೆ.

೪೨ ವರ್ಷದ ಬೆಂಗಳೂರಿನಿAದ ವಾಪಾಸ್ಸಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಕೊವಿಡ್ ದೃಢಪಟ್ಟಿತ್ತು. ನಂತರ ಕಾರವಾರಕ್ಕೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧ್ಯಾಹ್ನ ೩.೩೦ ರ ವೇಳೆಗೆ ಮೃತಪಟ್ಟಿದ್ದು, ಶಿರಸಿಯಲ್ಲಿ ಮೊದಲ ಸಾವು ದಾಖಲಾಗಿದೆ.

ಕಳೆದ ಮೂರು ದಿನಗಳಿಂದ ೧೪ ಪ್ರಕರಣಗಳು ದಾಖಲಾಗಿದ್ದು, ಇಂದು ಓರ್ವ ವ್ಯಕ್ತಿ ಮೃತಪಟ್ಟಿದ್ದು ಕಾರವಾರದ ಕ್ರಿಮ್ಸ ನಲ್ಲಿ ಘಟನೆ ಜರುಗಿದೆ ಇದು ಜಿಲ್ಲೆಯ ಎರಡನೇ ಕರೋನಾ ಸಾವು ಆದಂತಾಗಿದೆ.
ಮುAಡಗೋಡು ಒಂದು ಪ್ರಕರಣ ವರದಿಯಾಗಿದ್ದು ಮಾಹಿತಿ ಹೊರಬರಬೇಕಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕರೋನಾ ಸಂಕಟ ಮುಂದುವರೆದಿದ್ದು ಸಾಮಾಜಿಕ ಅಂತರ ಮಾಸ್ಕ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ. ಈಗಾಗಲೇ ಭಟ್ಕಳ ಪುರಸಭೆ,ಜಾಲಿ ಪಟ್ಟಣ ಪಂಚಾಯತಿ ಮಧ್ಯಾಹ್ನ ೨ ಗಂಟೆಯ ಬಳಿಕ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಾಕ್ ಡೌನ್ ಮಾಡಲಾಗಿದೆ. ಕುಮಟಾ ತಾಲೂಕಿನಲ್ಲಿ ಮಧ್ಯಾಹ್ನ ೨ಗಂಟೆ ಬಳಿಕ ಸ್ವಯಂಘೋಷಿತ ಲಾಕ್ ಡೌನ್ ನಿಯಮ ಜಾರಿಗೆ ತಂದಿದೆ ಎಂದು ತಿಳಿದು ಬಂದಿದೆ.

error: