May 14, 2024

Bhavana Tv

Its Your Channel

ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಓಟ ಶಿರಸಿಗೆ ಶಾಕ್

ಉತ್ತರಕನ್ನಡದಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಆಸ್ಪತ್ರೆಯ ಸಿಬ್ಬಂದಿ ಬಳಿಕ ದೇವಾಲಯ ಸಿಬ್ಬಂದಿಗೆ ವಕ್ಕರಿಸುವ ಮೂಲಕ ಇನ್ನಷ್ಟು ಆತಂಕ ಮೂಡಿಸಿದೆ

ಶಿರಸಿಯ ಪ್ರಸಿದ್ದ ದೇವಾಲಯವೆಂದೆ ಕರೆಯಲ್ಪಡುವ ಮಾರಿಕಾಂಬಾ ದೇವಸ್ಥಾನದ ೧೫ ಜನ ಸಿಬ್ಬಂದಿಗೂ ಪಾಸಿಟಿವ್ ಬಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ೪೦ ಪಾಸಿಟಿವ್ ಪತ್ತೆಯಾಗಿದೆ.

ಶಿರಸಿಯ ಮಾರಿಕಾಂಬ ದೇವಿಯ ಭಕ್ತರಿಗೆ ಕರೋನಾ ಮಹಾ ಮಾರಿ ಶಾಕ್ ನೀಡಿದ್ದು ದೇವಸ್ಥಾನದ ಪಕ್ಕದ ಮನೆಯಲ್ಲಿದ್ದ ಸೋಂಕಿತನಿಗೆ ಮೊದಲು ಸೋಂಕು ಕಾಣಿಸಿಕೊಂಡಿದ್ದು ಈತ ಪ್ರತಿ ದಿನ ದೇವರ ದರ್ಶನಕ್ಕೆ ಬರುವ ಮೂಲಕ ಇಲ್ಲಿನ ಸಿಬ್ಬಂದಿಗೂ ಸೋಂಕು ತಟ್ಟಿದ್ದು, ಆತನ ಸಂಪರ್ಕದಿAದ ಆತನ ಕುಟುಂಬದವರು ಸೇರಿ ೨೧ ಜನ ಸೋಂಕಿತರಾಗಿದ್ದು ಶಿರಸಿಯೊಂದರಲ್ಲೇ ಇಂದು ೨೫ ಪಾಸಿಟಿವ್ ಬರುವ ಜೊತೆಗೆ ಜಿಲ್ಲೆಯ ಭಟ್ಕಳ ಹೊರತುಪಡಿಸಿದರೆ ಒಟ್ಟು ೫೫ ಪಾಸಿಟಿವ್ ಬರುವ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಶಿರಸಿಯು ಎರಡನೇ ಸ್ಥಾನಕ್ಕೆ ಜಿಗಿದಿದೆ.
ಇನ್ನು ಶಿರಸಿಯ ಕೆಡಿಸಿಸಿ ಬ್ಯಾಂಕ್ ನ ಮೂರು ಜನ ಸಿಬ್ಬಂದಿಗೂ ಪಾಸಿಟಿವ್ ವರದಿಯಾಗಿದೆ
ಜಿಲ್ಲೆಯ ಮುಂಡಗೋಡು -೨ ,, ಕುಮಟಾ- ೨ ಕಾರವಾರ- ೨ ,ಹಳಿಯಾಳ – ೬ ,ಹೊನ್ನಾವರ-೨ ,ಭಟ್ಕಳ – ೧ ಕರೋನಾ ಪಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ ೫೮೫ ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು ೨೨೭ ಜನ ಸೋಂಕಿನಿAದ ಗುಣಮುಖರಾಗಿದ್ದಾರೆ ೩೫೪ ಜನ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ನಾಲ್ಕು ಜನ ಕರೋನಾ ಸೊಂಕಿನಿAದ ಮೃತಪಟ್ಟಿದ್ದಾರೆ

error: