May 15, 2024

Bhavana Tv

Its Your Channel

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 12 ಜನರ ಮೇಲೆ ತಾಲೂಕಾಡಳಿತ ನೊಟೀಸ್ ಜಾರಿ ಮಾಡಿದ್ದು ಇಬ್ಬರ ಮೇಲೆ ಎಫ್‍ಐ ಆರ್ ದಾಖಲು ಮಾಡಿದೆ.

ಭಟ್ಕಳ : ತಾಲೂಕಿನಲ್ಲಿ ಕರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಟ್ಟಣದ ಕೆಲವು ಭಾಗಗಳಿಗೆ ವಾಸ್ತವ್ಯದ ಉದ್ದೇಶಕ್ಕಾಗಿ ಬರುವದನ್ನು ತಾಲೂಕಾಡಳಿತ ನಿರ್ಬಂಧಿಸಿದೆ. ತಾಲೂಕಿಗೆ ಹೊರ ರಾಜ್ಯದಿಂದ ಬಂದಿದವರಿಗೆ ಅವರ ಗಂಟಲ ದ್ರವ ತೆಗೆದು ನೇರವಾಗಿ ಹೋಮ್ ಕ್ವಾರಂಟೈನನಲ್ಲಿ ಇಟ್ಟು ಅವರ ಮೇಲೆ ನಿಗಾ ಇಡಲು ಜಿಲ್ಲಾಡಳಿತ ವಾಚ್ ಆ್ಯಫ್ ಮೂಲಕ ವ್ಯವಸ್ಥೆ ಮಾಡಿದೆ. ಕ್ವಾರಂಟೈನ್ ನಲ್ಲಿ ಇದ್ದವರಿಗೆ 500ಮಿ. ಪರಿಧಿಯನ್ನು ನಿಗದಿಪಡಿಸಲಾಗಿದೆ. ಒಂದೊಮ್ಮೆ ಅವರು ತಮ್ಮ ಪರಿಧಿಯನ್ನು ಬಿಟ್ಟು ಬಂದಲ್ಲಿ ತಾಲೂಕಾಡಳಿತ ಅವರಿಗೆ ನೋಟಿಸ್ ನೀಡುತ್ತಿದೆ. ಶನಿವಾರ 122 ಮಂದಿ ಹೋ ಕ್ವಾರಂಟೈನನಲ್ಲಿ ಇದ್ದು ಅದರಲ್ಲಿ 12 ಮಂದಿಗೆ ನೊಟೀಸ್ ನೀಡಲಾಗಿದೆ. ಇನ್ನಿಬ್ಬರ ಎಫ್‍ಐ ಆರ್ ದಾಖಲಾಗಿದೆ. ನೊಟೀಸ್ ಪಡೆದವರು ಇನ್ನೊಂದು ಬಾರಿ ನಿಯಮ ಉಲ್ಲಂಘಿಸಿದರೆ ಎಫ್‍ಐ ಆರ್ ದಾಖಲು ಮಾಡಲಾಗುವದು ಎಂದು ತಹಸೀಲ್ದಾರ ಎಸ್ ರವಿಚಂದ್ರ ತಿಳಿಸಿದ್ದಾರೆ
ಮುಂಬಯಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಸೇರಿದಂತೆ ಬೇರೆ ಯಾವುದೇ ರಾಜ್ಯದಿಂದ ಬಂದಿದ್ದರು ಸಹ 14 ದಿನ ಹೋಮ್ ಕ್ವಾರಂಟೈನ ಆದೇಶ ಪಾಲನೆ ಅಗತ್ಯವಾಗಿದೆ. ಭಟ್ಕಳಕ್ಕೆ ಬಂದ ದಿನದಂದು ಅವರ ಗಂಟಲ ದ್ರವ ತೆಗೆದು ಕೈಗೆ ಹೋಮ್ ಕ್ವಾರಂಟೈನ ಸೀಲ್ ಮಾಡಿ ಕ್ವಾರಂಟೈನ ವಾಚ್ ಅಪ್ ನಲ್ಲಿ ಅವರ ಹೆಸರು ನಮೂದಿಸಿ ಮನೆಗೆ ಕಳುಹಿಸಲಾಗುತ್ತದೆ.

error: