May 15, 2024

Bhavana Tv

Its Your Channel

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ೬೯ ವರ್ಷದ ವ್ಯಕ್ತಿ ಶನಿವಾರ ಮೃತ, ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಡ.

ಭಟ್ಕಳ: ಸುಲ್ತಾನ್ ಸ್ಟ್ರೀಟ್ ನ ವ್ಯಕ್ತಿಗೆ ಕಳೆದ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶನಿವಾರದಂದು ಮುರುಡೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ, ವ್ಯಕ್ತಿಗೆ ವೈದ್ಯರು ಔಷಧಿಯನ್ನು ನೀಡಿ ಕಳುಹಿಸಿದ್ದರು ಎನ್ನಲಾಗಿದೆ. ಮನೆಗೆ ಕರೆದುಕೊಂಡು ಬಂದ ಬಳಿಕ ರಾತ್ರಿ ೧೨ ಗಂಟೆಗೆ ಆರೋಗ್ಯ ಇನ್ನಷ್ಟು ಹದಗೆಟ್ಟು ಉಸಿರಾಡಲಾಗದೇ ಈತ ಮೃತಪಟ್ಟಿದ್ದಾನೆ.

ಭಾನುವಾರಂದು ಬೆಳಿಗ್ಗೆ ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಧ್ಯಾಹ್ನ ಬಂದ ವರದಿಯಲ್ಲಿ ಮೃತನಿಗೆ ಸೋಂಕು ತಗುಲಿತ್ತು ಎಂದು ದೃಢಪಟ್ಟಿದೆ. ಮೃತದೇಹವನ್ನು ಪಿಪಿಇ ಬ್ಯಾಗಿನಲ್ಲಿ ಕೊಂಡೊಯ್ದು, ಸಮಾಧಿ ಮಾಡಲಾಗಿದೆ.

ಉಪವಿಭಾಗಧಿಕಾರಿ ಭರತ್ ಎಸ್., ತಹಶಿಲ್ದಾರರ ಎಸ್.ರವಿಚಂದ್ರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳ ನೇತೃತ್ವದಲ್ಲಿ ಪಿಪಿಇ ಕಿಟ್ ಧರಿಸಿದ ಪೌರ ಕಾರ್ಮಿಕರು, ಮೃತನ ಕುಟುಂಬದ ನಾಲ್ವರು ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಸದ್ಯ ಮೃತನ ಕುಟುಂಬಸ್ಥರು ಹಾಗೂ ಆತನ ಸಂಪರ್ಕದಲ್ಲಿರುವವರ ಮಾಹಿತಿ ಕಲೆ ಹಾಕಿ ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

ಸರ್ಕಾರದ ಆದೇಶದಂತೆ ತಾಲೂಕಾಡಳಿತ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಗಳ ಉಪಸ್ಥಿತಿಯಲ್ಲಿ ಮೃತ ಸೋಂಕಿತನ ಅಂತ್ಯಕ್ರಿಯೆ ನಡೆಸಲಾಗಿದೆ. ಭಟ್ಕಳದಲ್ಲಿ ಇದು ಮೊದಲ ಸಾವಿನ ಪ್ರಕರಣ ಆಗಿದೆ. ಆದರೂ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ತಹಶಿಲ್ದಾರ ಎಸ್.ರವಿಚಂದ್ರ ಹೇಳಿದ್ದಾರೆ.

error: