May 15, 2024

Bhavana Tv

Its Your Channel

ವಿವಾಹಿತ ಮಹಿಳೆ ಆತ್ಮಹತ್ಯೆ – ಗಂಡನ ಮನೆಯ ಕಿರುಕುಳ ಆರೋಪ

ಹೊನ್ನಾವರ – ಕಾಸರಕೋಡ ಟೀಚರ್ ಕಾಲೋನಿಯ ೩೨ ವರ್ಷದ ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿಯೇ ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ದೀಪಾ ಪ್ರವೀಣ ನಾಯ್ಕ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬoಧಪಟ್ಟoತೆ ಮೃತ ಮಹಿಳೆಯ ತಾಯಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು ಆತ್ಮಹತ್ಯೆಗೆ ದೀಪಾಳ ಮಾವ ಹರಿಯಪ್ಪ ನಾಯ್ಕ ಹಾಗೂ ಆಕೆಯ ಗಂಡ ಪ್ರವೀಣ ಹರಿಯಪ್ಪ ನಾಯ್ಕ ಎಂಬವರೇ ಕಾರಣ ಎಂದು ಆರೋಪಿಸಿದ್ದಾರೆ.
ಕಳೆದೊಂದು ವರ್ಷದಿಂದಲೂ ದೀಪಾಳಿಗೆ ಗಂಡನಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎನ್ನುವ ಅಂಶವನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ಪಷ್ಟಪಡಿಸಿರುವ ಮೃತಳ ಸಹೋದರ ಮಾರುತಿ ನಾಯ್ಕ ಈ ಹಿಂದೆಯೇ ಕುಟುಂಬದ ಹಿರಿಯರು ದೀಪಾಳ ಗಂಡನಮನೆಗೆ ಹೋಗಿ ಮಾತುಕತೆ ಮಾಡಿದಾಗಲೂ ಆಕೆಯ ಮಾವ ಮತ್ತು ಗಂಡ ನೀನು ನಮಗೆ ಬೇಡ ಎಲ್ಲಾದರೂ ಹೋಗಿ ಸಾಯಿ, ನೀನೊಂದು ದೊಡ್ಡ ಪೀಡೆ ಎಂದೆಲ್ಲಾ ಬೈದಿದ್ದರು. ಇದೇ ರೀತಿಯ ಕಿರುಕುಳ ಮುಂದುವರೆದ ಕಾರಣ ಮನನೊಂದು ಆಕೆ ದಿನಾಂಕ ೧೭-೦೭-೨೦೨೦ ಶುಕ್ರವಾರ ಮದ್ಯಾಹ್ನ ೨ ರಿಂದ ೫ ಗಂಟೆ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: