May 19, 2024

Bhavana Tv

Its Your Channel

ಕಳ್ಳತನ ಮಾಡಲಾದ ಬಂಗಾರ ಪತ್ತೆ ಹಚ್ಚಿದ ಹೋನ್ನಾವರ ಪೋಲಿಸರು: ೨ ಜನ ಆರೋಪಿಗಳು ಹಾಗೂ ಮಾರುತಿ ಕಂಪನಿಯ ರಿಟ್ಜ ಕಾರು ಮತ್ತು ಪಲ್ಸರ್ ಬೈಕ್, ೨೦ಲಕ್ಷ ಮೌಲ್ಯದ ಬಂಗಾರ ವಶಕ್ಕೆ.

ಹೊನ್ನಾವರ : ಕಳೆದ ಕೆಲವರ್ಷಗಳಿಂದ ಕಳ್ಳತನ ಪ್ರಕರಣ ಪತ್ತೆಯಾಗುತ್ತಿದ್ದು ಪೋಲಿಸ್ ಇಲಖೆಗೆ ತಲೆ ನೋವಾಗಿ ಪರಿಣಮಿಸಿತ್ತು. ಇದನ್ನು ಸವಾಲಿಗೆ ಸ್ವೀಕರಿಸಿದ ಹೊನ್ನಾವರ ಪೋಲಿಸರು ಆರೋಪಿಗಳ ಎಡೆಮುರಿ ಕಟ್ಟಿದ್ದು, ೨೦ಲಕ್ಷ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯ ೧೧-ಪ್ರಕರಣಗಳು ಹಾಗೂ ಕುಮಟ ಠಾಣೆಯ ೩-ಪ್ರಕರಣಗಳಿಗೆ ಸಂಬoಧಿಸಿದoತೆ ಸುಮಾರು ೨೦-ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿತರ ಕಡೆಯಿಂದ ವಶಪಡೆದುಕೊಳ್ಳಲಾಗಿದ್ದು, ಆರೋಪಿತರು ಕೃತ್ಯಕ್ಕೆ ಉಪಯೋಗಿಸುತಿದ್ದ ಸುಮಾರು ೨,೫೦,೦೦೦/- ರೂ. ಬೆಲೆಯ ಮಾರುತಿ ಕಂಪನಿಯ ರಿಟ್ಜ ಕಾರ ಹಾಗೂ ಸುಮಾರು ೨೫,೦೦೦/- ರೂ ಬೆಲೆಯ ಪಲ್ಸರ್ ಬೈಕನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಆರೋಪಿತರು ಚಂದಾವರದ ಸಹೋದರಾಗಿದ್ದು ಸಜ್ಜಾದ ಅಹ್ಮದ ೨೮-ವರ್ಷ, ಮುಬಾಸೀರ ೩೦-ವರ್ಷ, ಎಂದು ತಿಳಿದುಬಂದಿದ್ದು, ಅಡಿಕೆ ವ್ಯಾಪಾರಿ ವೃತ್ತಿ ನಡೆಸುತ್ತಿದ್ದು, ಈ ಮಧ್ಯೆ ಕಳ್ಳತನವನ್ನು ಮಾಡುತ್ತಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶದ ಮೇರೆಗೆ ವಸಂತ ಆಚಾರ್ಯ ಸಿಪಿಐ ಹೊನ್ನಾವರ ರವರ ನೇತೃತ್ವದಲ್ಲಿ ಪಿಎಸೈಗಳಾದ ಶಶಿಕುಮಾರ್ ಸಿ.ಆರ್. ಶ್ರೀಮತಿ ಸಾವಿತ್ರಿ ನಾಯಕ, ಅಶೋಕಕುಮಾರ ಹೊನ್ನಾವರ ಠಾಣೆಯ ಸಿಬ್ಬಂಧಿಗಳಾದ ಕೃಷ್ಣ ಡಿ. ಗೌಡ, ರಮೇಶ ಭೀ. ಲಮಾಣಿ, ಮಹಾವೀರ ಡಿ.ಎಸ್. ಉದಯ ಮುಗದೂರ, ರಯೀಸ್ ಭಾಗವಾನ್, ಅಶೋಕ ನಾಯ್ಕ, ತಿಮ್ಮಪ್ಪ ವೈದ್ಯ, ಹಾಗೂ ವಾಹನ ಚಾಲಕರಾದ ಶಿವಾನಂದ ಚಿತ್ರಗಿ, ಚಂದ್ರಶೇಖರ ನಾಯ್ಕ ಹಾಗೂ ಹೊನ್ನಾವರ ಠಾಣೆಯ ಸಿಬ್ಬಂಧಿಗಳು ಮತ್ತು ಕಾರವಾರ ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ವಿಭಾಗದ ಸಿಬ್ಬಂಧಿಯವರಾದ ಸುಧೀರ ಮಡಿವಾಳ, ಅಣ್ಣಪ್ಪ ಬಡಿಗೇರ, ರಮೇಶ ನಾಯ್ಕ ಇವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಪತ್ತೆ ಕಾರ್ಯ ಪ್ರಶಂಸಸಿ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿದ್ದಾರೆ.

error: