May 17, 2024

Bhavana Tv

Its Your Channel

ಹೊನ್ನಾವರದಲ್ಲಿ ಮಳೆ ಆವಾಂತರ, ತಗ್ಗು ಪ್ರದೇಶದ ೨೦೦ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು; ಪರಿಸ್ಥಿತಿ ಅವಲೋಕಿಸಿ ಕಾಳಜಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ತಾಲೂಕ ಆಡಳಿತದ ನಿರ್ಧಾರ.

ಹೊನ್ನಾವರ: ಕಳೆದ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಸೋಮವಾರವು ಮುಂದುವರೆದಿದ್ದು, ರವಿವಾರ ಸಂಜೆಯಿoದಲೇ ಗ್ರಾಮೀಣ ಭಾಗದಲ್ಲಿ ನೀರು ತುಂಬಲಾರoಭಿಸಿದೆ. ಗುಂಡಬಾಳ, ಭಾಸ್ಕೇರಿ, ಸಾಲ್ಕೋಡ್, ಬಡಗಣೆ ಹೊಳೆಯು ತುಂಬಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗುಂಡಬಾಳ, ಚಿಕ್ಕನಕೋಡ್, ಗುಂಡಿಬೈಲ್, ಹಾಡಗೇರಿ, ಮುಟ್ಟಾ, ಹಡಿನಬಾಳ, ಭಾಸ್ಕೇರಿ, ಗಜನಿಕೇರಿ, ದೊಡ್ಡಹಿತ್ತಲ್, ವರ‍್ನಕೇರಿ, ಕೋಣಾರ್, ಕರ್ಕಿ, ಕಡತೋಕಾ ಭಾಗದ ಹಲವು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕಂದಾಯ, ಪೋಲಿಸ್, ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡೆಲ್ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ.
ತಹಶೀಲ್ದಾರ ವಿವೇಕ ಶೇಣ್ವೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಮಳೆಯು ಕಡಿಮೆಯಾಗುವವರೆಗೆ ಕಾಳಜಿ ಕೇಂದ್ರಕ್ಕೆ ಬರಲು ನೆರೆಯ ಭೀತಿಯ ಮನೆಯ ಸದಸ್ಯರಿಗೆ ಮನವಿ ಮಾಡಿದ್ದು, ಸರ್ಕಾರವು ಸಕಲ ರೀತಿಯು ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ. ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರಕ್ಕಾಗಿ ಹೆಚ್ಚುವರಿ ಕೊಠಡಿಗಳನ್ನು ಒದಗಿಸಲಾಗುವುದು. ಊಟ ವಸತಿಯ ಜೊತೆ ಆರೊಗ್ಯ ತಪಾಸಣೆ ನಡೆಸಲಾಗುವುದು ಎಂದು ಭಾವನ ವಾಹಿನಿಗೆ ಮಾಹಿತಿ ನೀಡಿದ್ದಾರೆ.

error: