May 18, 2024

Bhavana Tv

Its Your Channel

ಗ್ರಾ.ಪಂ ಚುನಾವಣೆ: ಶತಾಯುಷಿ ಅಜ್ಜಿಯಿಂದ ಮತದಾನ

ಭಟ್ಕಳ: ಗ್ರಾ.ಪಂ ಚುನಾವಣೆಯಲ್ಲಿ ಶತಾಯುಷಿ ಅಜ್ಜಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಇಳಿ ವಯಸ್ಸಿನಲ್ಲೂ ಚಲಾಯಿಸಿದ್ದಾರೆ.
ತಾಲೂಕಿನ ಮುಟ್ಟಳ್ಳಿ ಗ್ರಾಮದ 103 ವಯಸ್ಸಿನ ವೃದ್ಧೆ ದುರ್ಗಮ್ಮ ಜಟ್ಟಪ್ಪ ನಾಯ್ಕ ಮತಗಟ್ಟೆಗೆ ಆಗಮಿಸಿ, ಸಹಾಯಕರಿಂದ ಮತದಾನ ಮಾಡಿದ್ದಾರೆ.

ಈ ಇಳಿ ವಯಸ್ಸಿನಲ್ಲಿ ಮತದಾನ ಮಾಡಿರುವುದರಿಂದ ಗ್ರಾಮಸ್ಥರು ಅಜ್ಜಿ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮತದಾನ ಮಾಡದೆ ಮನೆಯಲ್ಲಿಯೇ ಸಬೂಬು ಉಳಿದುಕೊಂಡಿದ್ದವರು ನಾಚುವಂತೆ ಮಾಡಿದ್ದಾರೆ.

error: