May 18, 2024

Bhavana Tv

Its Your Channel

ಸರ್ಕಾರ ನಗರದ ಅಭಿವೃದ್ದಿಗಾಗಿ ಮಾಡುತ್ತಿರುವ ಒಳಚರಂಡಿ ಕಾಮಗಾರಿಯನ್ನು ಧಾರ್ಮಿಕತೆಯ ಲೇಪ ಹಚ್ಚಿ ಯೋಜನೆ ಸ್ಥಗಿತಗೊಳಿಸುವ ಕ್ರಮ ಸರಿಯಲ್ಲ – ಜಿಲ್ಲಾಧಿಕಾರಿ ಡಾ. ಹರೀಶಕುಮಾರ

ಭಟ್ಕಳ: ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅವರು ಜಾಲಿ ಪಟ್ಟಣ ಪಂಚಾಯತ್‌ಗೆ ಭೇಟಿ ನೀಡಿ ಸದಸ್ಯರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.ಜಾಲಿ ಪ.ಪಂ ವ್ಯಾಪ್ತಿಯಲ್ಲಿ ೨೦೦ಕೋಟಿ ರೂ ಅನುದಾನದ ಯುಜಿಡಿ ಒಳಚರಂಡಿ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದ್ದು ಸ್ಥಳೀಯರು ಕೆಲವು ಕಾರಣಗಳನ್ನು ನೀಡಿ ಅದನ್ನು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೇಲಿನಂತೆ ಸ್ಪಷ್ಟನೆ ನೀಡಿದ್ದು ನಗರ ಅಭಿವೃದ್ಧಿಯಾದರೆ ಮುಂದಿನ ಪೀಳಿಗೆಗೆ ಬದುಕಲು ಅನುವು ಮಾಡಿದಂತಾಗುತ್ತಾದೆ. ನಗರವು ಬೆಳೆದಂತೆ ಅದಕ್ಕೆ ತಕ್ಕ ಹಾಗೇ ಮೂಲಸೌಕರ್ಯ ಇರಬೇಕು. ಪ್ರಜಾಪ್ರಭುತ್ವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಅಧಿಕಾರಿಗಳ ಏಕ ನಿರ್ಣಯ ಸಾಧ್ಯವಿಲ್ಲ. ಪ್ರತಿಯೊಂದು ಯೋಜನೆಗೂ ಜನಪ್ರತಿನಿಧಿಗಳ ಅಭಿಮತ ಮುಖ್ಯವಾಗಿರುತ್ತದೆ. ಯೋಜನೆ ಜಾರಿಗೊಳಿಸುವಾಗ ಅಡೆತಡೆಗಳು ಸಹಜ. ಜನಪ್ರತಿನಿಧಿಗಳು ಅದನ್ನು ನಿಭಾಯಿಸಿ ನಗರದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದರು. ಉದ್ಯಮಿಗಳು ನಗರ ಭಾಗದತ್ತ ಬರಬೇಕಾದರೆ ಉತ್ತಮ ಮೂಲಸೌಕರ್ಯದ ಅವಶ್ಯಕತೆ ಇದೆ ಎಂದರು. ಪಟ್ಟಣ ಪಂಚಾಯತ್ ಕಛೇರಿಯ ಹೊಸಕಟ್ಟಡ ನಗರದ ಮಧ್ಯಭಾಗದಲ್ಲಿ ಆದರೆ ಜನರಿಗೆ ಅನುಕೂಲ ಎಂಬ ಸದಸ್ಯರ ಮಾತಿಗೆ ಪ್ರತಿಕ್ರೀಯೆ ನೀಡಿದ ಅವರು ಆಡಳಿತ ಕೆಲಸಕ್ಕಾಗಿ ಜನರು ಕಛೇರಿ ಅಲೆದಾಡಬಾರದು. ಎಲ್ಲವೂ ಈಗ ಡಿಜಿಟಲೈಜ್ ಆಗಿದೆ. ಎಲ್ಲಾ ದಾಖಲೆಗಳು ಆನಲೈನಲ್ಲೆ ಸೀಗುತ್ತದೆ. ಸದಸ್ಯರು ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಎ ರವಿಚಂದ್ರ,ಜಾಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಮೀಮ ಬಾನು ಉಪಾಧ್ಯಕ್ಷೆ ಫರ್ಹಾನ ಬಾನು, ಮುಖ್ಯಾಧಿಕಾರಿ ಅಜಯ ಬಾಂದೇಕರ್, ಹುಲಿಮನೆ ಇದ್ದರು

error: