May 18, 2024

Bhavana Tv

Its Your Channel

ತಾಲೂಕಾ ಆಸ್ಪತ್ರೆಗೆ ಎರಡು ಫ್ರೀಜರ್ ಯಂತ್ರ (ದೇಹವನ್ನು ಸಂರಕ್ಷಿಸಿಡುವ ಯಂತ್ರ)ವನ್ನು ಹಸ್ತಾಂತರ.

ಭಟ್ಕಳ(ಜ.೨): ತಾಲೂಕಾ ಆಸ್ಪತ್ರೆಯಲ್ಲಿ ಇತರೇ ಯಾವುದೇ ಖಾಸಗೀ ಆಸ್ಪತ್ರೆಗೆ ಕಡಿಮೆಯಿಲ್ಲದಂತೆ ಚಿಕಿತ್ಸೆ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಒಂದು ಹೈಟೆಕ್ ಆಸ್ಪತ್ರೆಯಾಗಲಿ ಎಂದು ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಅವರು ಹೇಳಿದರು. ಅವರು ತಾಲೂಕಾ ಆಸ್ಪತ್ರೆಗೆ ಎರಡು ಫ್ರೀಜರ್ ಯಂತ್ರ (ದೇಹವನ್ನು ಸಂರಕ್ಷಿಸಿಡುವ ಯಂತ್ರ)ವನ್ನು ಹಸ್ತಾಂತರಿಸಿ, ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ನಾವು ಜನ್ಮಕ್ಕೆ ಬಂದ ನಂತರ ನಾವು ಮಾಡಿದ ಉತ್ತಮ ಕಾರ್ಯಗಳು ಶಾಶ್ವತವಾಗಿರುತ್ತವೆಯೇ ವಿನಹ ನಾವು ಸಂಪಾದಿಸಿ ಉಳಿಸಿ ಹೋಗಿದ್ದಲ್ಲ. ನಾವು ಮಾಡುವ ದಾನವು ಕೂಡಾ ಯಾವಾಗಲೂ ಅಗತ್ಯವಿದ್ದವರಿಗೆ ತಲುಪುವುಂತಾಗಬೇಕು, ದಾನದಿಂದ ಪುಣ್ಯ ಸಂಚಯನ ಸಾಧ್ಯ ಎಂದರು. ನಮ್ಮ ಸಂಸ್ಥೆಯಿAದ ಈಗಾಗಲೇ ಅಂಗನವಾಡಿಯನ್ನು ಪ್ರಾರಂಭಿಸಿದ್ದು ಮುಂದಿನ ದಿನಗಳಲ್ಲಿ ಸಂಸ್ಕೃತ ಪಾಠಶಾಲೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ತಾವು ಕೊಡಮಾಡಿದ ಎರಡು ಫ್ರೀಜರ್ ಯಂತ್ರಗಳನ್ನು ದಿ. ಹರಿಶ್ಚಂದ್ರ ಕಾಮತ್ ಅವರ ಸ್ಮರಣಾರ್ಥ ಅವರ ಪುತ್ರ, ಹಾಗೂ ಬೆಂಗಳೂರಿನ ದಿ. ಶಾಂತಾಬಾಯಿ ಮಂಜುನಾಥ ಪ್ರಭು ಅವರ ಸ್ಮರಣಾರ್ಥ ಅವರ ಪುತ್ರ ನೀಡಿದ್ದಾರೆ ಎಂದರು. ಇದು ಸರಕಾರಿ ಆಸ್ಪತ್ರೆಯಲ್ಲಿ ಅಗತ್ಯವಿರುವವರಿಗೆ ನೀಡಿದ ಸೇವೆಯಾಗಿದ್ದು ಉತ್ತಮ ಸೇವೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಮಾತನಾಡಿ ಜನರ ಸಹಕಾರದಿಂದ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ. ಅನೇಕರು ಮುಂದೆ ಬಂದು ದಾನ ನೀಡಿದ್ದಾರೆ. ಅದರಂತೆ ರಾಮದಾಸ ಪ್ರಭುಗಳೂ ಕೂಡಾ ಅವರಾಗಿಯೇ ಕೇಳಿ ಅಗತ್ಯದ ಎರಡು ಫ್ರೀಜಗಳನ್ನು ನೀಡಿದ್ದಾರೆ. ಸರಕಾರದ ಸಹಾಯ ಸಹಕಾರವೂ ಕೂಡಾ ದೊರೆತಿದ್ದು ಮುಂದೆಯೂ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ ಮನುಷ್ಯರಿಗೆ ಹುಟ್ಟು ಮತ್ತು ಸಾವು ಜೀವನದಲ್ಲಿ ಅನಿವಾರ್ಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ಮರಣಪಟ್ಟವರ ದೇಹವನ್ನು ಸಂರಕ್ಷಿಸಿಡುವ ಅಗತ್ಯತೆ ಬೀಳುತ್ತದೆ. ವ್ಯವಸ್ಥೆ ಇಲ್ಲದಾಗ ತೀವ್ರ ನೋವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಹಾಯವಾಗುವಂತೆ ಫ್ರೀಜರ್ ಯಂತ್ರ ದಾನವಾಗಿ ನೀಡಿರುವುದನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ ಮಾತನಾಡಿ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಿಗಿಂತ ಭಟ್ಕಳ ಸರಕಾರಿ ಆಸ್ಪತ್ರೆ ಚಿಕಿತ್ಸೆ ನೀಡುವಲ್ಲಿ ಇಂದು ಮುಂದೆ ಇದೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಇಲ್ಲಿನ ಆಸ್ಪತ್ರೆಯ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದು ಇಂತಹ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಡಾ. ಲಕ್ಷ್ಮೀಶ ನಾಯ್ಕ, ಡಾ. ಸತೀಶ ಬಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಶೋಕ ಪೈ, ಶ್ರೀನಿವಾಸ ಕಾಮತ್, ಅರವಿಂದ ಪೈ, ಪುಂಡಲೀಕ ಹೆಬಳೆ, ನಜೀರ್ ಅಹಮ್ಮದ್, ಗಣಪತಿ ಪ್ರಭು, ಪದ್ಮನಾಭ ಪೈ, ಡಾ. ಭರತ್ ಕುಮಾರ್, ಡಾ. ನಂಬಿಯಾರ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

error: