April 24, 2024

Bhavana Tv

Its Your Channel

ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯಲ್ಲಿ ವಿಜ್ಞಾನ- ವಿಧ್ಯಾರ್ಥಿ ಸಂವಾದ ಕಾರ್ಯಕ್ರಮ

ಹೊನ್ನಾವರ: ದಿನಾಂಕ ೨೫/೦೨/೨೦೨೧ ರಂದು ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಸಭಾಭವನದಲ್ಲಿ ವಿಜ್ಞಾನ- ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದವನ್ನ ನಡೆಸಿಕೊಟ್ಟ ಚಿತ್ರದುರ್ಗದಲ್ಲಿರುವ ಚಳ್ಳೇಕೆರೆಯ ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿಜ್ಞಾನಿ ಶ್ರೀ ಎಮ್ ಎಸ್ ಹೆಗಡೆ ಯವರು ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ಸರಳ ವಿಷಯವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ವಿಜ್ಞಾನದ “ಸಾಂದ್ರತೆ” ಪಾಠವನ್ನು ಪ್ರಾಯೋಗಿಕವಾಗಿ ಪ್ರದರ್ಶನಮಾಡಿ, ಈ ಪಾಠದ ಆಧಾರದಲ್ಲಿ ಗಣಿತ, ವಿಜ್ಞಾನ ಮತ್ತು ಇತರ ವಿಷಯಗಳನ್ನು ವಿದ್ಯಾರ್ಥಿಗಳು ಮನನ ಹಾಗೂ ಪುನರ್ ಮನನದ ಮೂಲಕ ಅರ್ಜಿಸಿಕೊಳ್ಳವ ವಿಧಾನವನ್ನು ಮಾರ್ಮಿಕವಾಗಿ ತಿಳಿಸಿದರು. ವಿಜ್ಞಾನ ಮತ್ತು ಗಣಿತ ವಿಷಯದ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಅದೇ ಸಂದರ್ಭದಲ್ಲಿ ಲಾರ್ಸನ್ ಮತ್ತು ಟರ್ಬೋ ಕಂಪನಿ ವತಿಯಿಂದ ನೀಡಿದ ೨ ಲಕ್ಷ ರೂಪಾಯಿ ಮೌಲ್ಯದ ವಿಜ್ಞಾನದ ಉಪಕರಣಗಳನ್ನು ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಿದರು. ಅವರಿಗೆ ಶಾಲೆ ಹಾಗೂ ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಲ್ ಎಮ್ ಹೆಗಡೆಯವರು ಹಾಗೂ ಎಲ್ಲ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕರಾದ ಶ್ರೀ ಶ್ರೀಕಾಂತ ಹಿಟ್ನಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

error: