May 14, 2024

Bhavana Tv

Its Your Channel

ವಿವಾಹ ನಿಶ್ಚಿತಗೊಂಡಿದ್ದ ಯುವತಿ ನಾಪತ್ತೆ

ಕಾರ್ಕಳ: ವಿವಾಹ ನಿಶ್ಚಿತಗೊಂಡಿದ್ದ ಕಾರ್ಕಳದ ಯುವತಿಯೊಬ್ಬಳು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಸೆ.2 ಬುಧವಾರ ನಡೆದಿದೆ. ಸಿಹಿ ತಿಂಡಿ ತಯಾರಿಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 20 ರ ಹರೆಯದ ಸುರಕ್ಷಿತ ನಾಪತ್ತೆಯಾದ ಯುವತಿ.
ಈಕೆ ಕಾರ್ಕಳದ ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಪ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದಳು. ಆಕೆಗೆ ಇತ್ತೀಚಿಗೆ ಹುಡುಗನೊಬ್ಬನೊಂದಿಗೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ. ಆದರೇ ಆಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು ಆತನ ಜೊತೆ ತೆರಳಿರಬೇಕು ಎಂದು ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ

error: