May 15, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಚಾರ್ಟರ್ಡ್ ಅಕೌಂಟೆOಟ್ ಜಿ.ಎಸ್. ಕಾಮತ್ ಕುಮಟಾ (೭೭) ನಿದನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಚಾರ್ಟರ್ಡ್ ಅಕೌಂಟೆoಟ್ ಎನ್ನುವ ಖ್ಯಾತಿಯ ಜಿ.ಎಸ್. ಕಾಮತ್ ಕುಮಟಾ (೭೭) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದರು.

ಮೃತರು ಪುತ್ರ ಚಾರ್ಟರ್ಡ್ ಅಕೌಂಟೆoಟ್ ಯೋಗೀಶ ಕಾಮತ್, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಸಿ.ಎ. ಮುಗಿಸಿದ ನಂತರ ೧೯೬೭ರಲ್ಲಿ ಕುಮಟಾದಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಜಿಲ್ಲೆಯ ಜನತೆಗೆ ಚಾರ್ಟರ್ಡ್ ಅಕೌಂಟೆoಟ್ ಆಗಿ ನಿರಂತರ ೫೩ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀ ಕೃಷ್ಣಾ ಮಿಲ್ಕ್ಸ್ ಪ್ರೈವೇಟ್ ಲಿಮಿಟೆಡ್ ಇದರ ಸಂಸ್ಥಾಪಕ ಅಧ್ಯಕ್ಷರು, ಜಿ.ಎಸ್.ಬಿ. ಸಮಾಜದ ಪ್ರಮುಖರು, ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಭಕ್ತರಾದ ಇವರು ಶ್ರೀ ಮಠದ ಆಡಿಟರ್ ಕೂಡಾ ಆಗಿದ್ದಾರೆ. ರೋಟರಿ ಕ್ಲಬ್ ಮೂಲಕ ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ನೀಡುತ್ತಿದ್ದ ಜಿ.ಎಸ್. ಕಾಮತ್ ಅವರ ನಿದನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಶ್ರೀಸಿದ್ಧಿ ಪ್ರತಿಷ್ಟಾನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯನ್ನು ಆರಂಭಿಸುವಲ್ಲಿ ಕೈಜೋಡಿಸಿದ್ದ ಇವರು ಸಂಸ್ಥಾಪಕ ಟ್ರಸ್ಟಿಯಾಗಿದ್ದರು. ಶ್ರೀ ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವರ ಪರಮಭಕ್ತರಾಗಿದ್ದ ಅವರು ಆಗಾಗ ಭೇಟಿ ಕೊಡುತ್ತಿದ್ದರಲ್ಲದೇ ಹಲವಾರು ವರ್ಷಗಳ ಕಾಲ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೂವಿನ ಅಲಂಕಾರ ಮಾಡಿ ತಮ್ಮ ಭಕ್ತಿಯನ್ನು ಮೆರೆದಿದ್ದರು.
ಅಂತಿಮ ದರ್ಶನ: ಜಿ.ಎಸ್. ಕಾಮತ್ ಅವರ ನಿದನಕ್ಕೆ ಶ್ರೀ ಕೃಷ್ಣಾ ಮಿಲ್ಕನ ಪುತ್ತು ಪೈ, ಶ್ರೀ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ವೇ.ಮೂ. ಭಾಲಚಂದ್ರ ಭಟ್ಟ, ಹಾಂಗ್ಯೋ ಐಸ್ ಕ್ರೀಮ್ ಕಂಪೆನಿಯ ಆಡಳಿತ ನಿರ್ದೇಶಕ ಪ್ರದೀಪ ಪೈ, ದಿನೇಶ ಪೈ, ಭಟ್ಕಳದ ಉಧ್ಯಮಿ ಎಸ್.ಎ. ರಹಮಾನ್, ಗಣೇಶ ಪ್ರಸಾದ್ ಕಾಮತ್, ಮುರಳಿ ನಾಯಕ್, ಆನಂದ ಪೈ, ಮುರಳೀಧರ ಪ್ರಭು, ವಿಠಲ ಆರ್. ನಾಯಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ್, ರೋಟರಿ ಸದಸ್ಯರು ಸೇರಿದಂತೆ ನೂರಾರು ಜನರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

error: