May 15, 2024

Bhavana Tv

Its Your Channel

ಆತ್ಮ ನಿರ್ಭರ ಯೋಜನೆಯಡಿ ಸಾಲ

ಕುಮಟಾ: ಕೊವಿಡ್ ಕಾರಣದಿಂದ ಬೀದಿ ಬದಿಯ ವ್ಯಾಪಾರಿಗಳು ತೀವೃ ಸಂಕಷ್ಟವನ್ನು ಎದರಿಸಿದ್ದಾರೆ. ಅವರ ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಬ್ಯಾಂಕ್‌ಗಳ ಸಹಕಾರಿಂದ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆಯಡಿ ಸಾಲ ನೀಡುತ್ತಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಹೇಳಿದರು.

 ಅವರು ಶುಕ್ರವಾರ ಪಟ್ಟಣದ ಹಳೇ ಮೀನುಮಾರುಕಟ್ಟೆ ಸಮೀಪದ ಸಮುದಾಯ ಭವನದಲ್ಲಿ ಪುರಸಭಾ ಕಾರ್ಯಾಲಯ ಹಾಗೂ ವಿವಿಧ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆಯಡಿ ಕಿರು ಸಾಲ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕುಮಟಾ ಪಟ್ಟಣದಲ್ಲಿ ೩೫೦ ಕ್ಕೂ ಅಧಿಕ ಬೀದಿಬದಿಯ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೇ, ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಈ ಕಾರಣದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಪ್ರತಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್‌ಗಳ ಮೂಲಕ ೧೦ ಸಾವಿರ ರೂ. ಕಿರು ಸಾಲ ನೀಡಲಾಗಿದೆ. ಸಣ್ಣ ಮೊತ್ತವೆಂದು ವ್ಯಾಪಾರಿಗಳು ಹಿಂದೆ ಸರಿಯುವುದು ಸರಿಯಲ್ಲ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕುಮಟಾ ಪಟ್ಟಣ ವ್ಯಾಪ್ತಿಯ ೧೩೮ ಬೀದಿ ವ್ಯಾಪಾರಸ್ಥರು ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೧೦೯ ಮಂಜೂರಿಯಾಗಿದೆ. ದಾಖಲೆ ಪತ್ರಗಳನ್ನು ಸರಿಯಾಗಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ವ್ಯಾಪಾರಿಗಳಿಗೆ ಈ ಯೋಜನೆಯ ಲಾಭ ಸಿಗುವಂತೆ ಮಾಡಲಾಗುತ್ತದೆ ಎಂದರು.
ಪುರಸಭಾ ಸದಸ್ಯರಾದ ವಿನಯಾ ಜಾರ್ಜ್, ಲಕ್ಷ್ಮಿ ಗೊಂಡ, ಚಂದಾವರ, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: