May 15, 2024

Bhavana Tv

Its Your Channel

ಕೋವಿಡ್ ಕಾರಣದಿಂದ ಭಟ್ಕಳ ತಾಲೂಕಿನಲ್ಲಿ ಈದ-ಉಲ್-ಫಿತರ್ ಹಬ್ಬವನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.

ಭಟ್ಕಳ : ನೆರೆಯ ರಾಜ್ಯ ಕೇರಳದಲ್ಲಿ ಮಂಗಳವಾರ ಚಂದ್ರದರ್ಶನವಾದ ಹಿನ್ನೇಲೆಯಲ್ಲಿ ಭಟ್ಕಳದಲ್ಲಿ ಗುರುವಾರ ಹಬ್ಬವನ್ನು ಆಚರಿಸಲಾಯಿತು. ಈ ಬಾರಿ ಕೋವಿಡ್ ಕಾರಣದಿಂದ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಲಾಗಿತ್ತು. ಮುಸ್ಲಿಂರು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯ ಕೋರಿಕೊಂಡರು.ಹಾಗೂ ಸಣ್ಣ ಸಣ್ಣ ಮಕ್ಕಳು ತಮ್ಮ ತಮ್ಮ ಹಿರಿಯರ ಜೋತೆ ಸೇರಿ ಮನೆಯಲ್ಲಿ ಪ್ರಾರ್ಥನೆ ಮಾಡುವುದು ವಿಶೇಷ ವಾಗಿತ್ತು.
ಈ ಸಂದರ್ಭದಲ್ಲಿ ಹಬ್ಬದ ಸಂದೇಶ ನೀಡಿದ ಖಲೀಫಾ ಜಾಮೀಯಾ ಮಸ್ಜೀದ್ ಖಾಜಿ ಮೌಲಾನಾ ಖಾಜಾ ಅಕ್ರಮಿ ಮದ್ನಿ ದೇಶ ಇಂದು ಸಂಕಷ್ಟದಲ್ಲಿದೆ. ಕೋವಿಡ್ ಕಾರಣದಿಂದ ಯುವಜನತೆ, ವೃದ್ದರು ಅಕಾಲಿಕ ಮರಣ ಹೊಂದುತ್ತಿದ್ದಾರೆ. ದೇವರು ನಮಗೆ ಉತ್ತಮ ಆರೋಗ್ಯ ಕೊಟ್ಟಿದ್ದಾನೆ. ಆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ. ನಿಮ್ಮ ನಿಮ್ಮ ಮನೆಯಲ್ಲಿದ್ದುಕೊಂಡು ಹಬ್ಬಗಳನ್ನು ಆಚರಿಸಿರಿ. ವಿನಾ: ಕಾರಣ ಯಾರು ಅನಗತ್ಯ ಓಡಾಟ ನಡೆಸಬೇಡಿ. ಕರೋನಾ ದೇಶದಿಂದ ಶೀಘ್ರದಲ್ಲಿ ಮುಕ್ತವಾಗುವಂತೆ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿರಿ ಎಂದು ಸಂದೇಶ ನೀಡಿದರು. ಹಬ್ನದ ಹಿನ್ನೇಲೆಯಲ್ಲಿ ಮುಸ್ಲಿಂರು ಮಸೀದಿಗೆ ತೆರಳಿ ಪ್ರಾರ್ಥನೆ ಮಾಡದಂತೆ ಪೊಲೀಸರು ಎಲ್ಲಾ ಕಡೆ ವೀಕ್ಷಕರನ್ನು ನೇಮಿಸಿ ಕಟ್ಟೆಚ್ಚರ ವಹಿಸಿದ್ದರು.

error: