May 15, 2024

Bhavana Tv

Its Your Channel

ಗ್ರಾಮ ಪಂಚಾಯತ ಮಾಜಿ ಸದಸ್ಯನಿಂದ ಕುಡಿಯುವ ನೀರಿನ ಸರಬರಾಜು, ಸಾರ್ವಜನಿಕರಿಂದ ಪ್ರಶಂಸೆ,

ಹೊನ್ನಾವರ ; ಬೇಸಿಗೆ ಬಂತೆAದರೆ ನೀರಿಗೆ ಹಾಹಾಕಾರ, ಆದರೆ ಸರಕಾರ ಪ್ರತಿ ಹಳ್ಳಿಹಳ್ಳಿಗೂ ಕುಡಿಯುವ ನೀರಿನ ಅನೇಕ ಯೋಜನೆಗಳನ್ನು ತಂದು ಯಾವುದೇ ಒಬ್ಬ ಸಾರ್ವಜನಿಕರಿಗೂ ನೀರಿನ ತೊಂದರೆ ಆಗದಂತೆ ನೋಡಿಕೋಳ್ಳುತ್ತಿದ್ದು ಜನರು ಕುಡಿಯುವ ನೀರಿನಿಂದ ವಂಚಿತರರಾಗಬಾರದೆ0ದು ಕೆಲಸ ನಿರ್ವಹಿಸುತ್ತಿದೆ, ಆದರೆ ಅಧಿಕಾರಿ ವರ್ಗದಲ್ಲಿ ಕೆಲವೊಬ್ಬರು ತಮ್ಮ ಕರ್ತವ್ಯ ಮರೆತು ದರ್ಪಗಿರಿ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಹೊನ್ನಾವರ ಅನಂತವಾಡಿ ಗ್ರಾಂಪAಚಾಯತ್ ಕೊಚ್ಚಿದಿ, ವಾರ್ಡಿನ ಬಡ ಕುಟುಂಬದ ಜನರಿಗೆ ಕುಡಿಯುವ ನೀರಿನ ತೊಂದರೆ ಇದ್ದರಿಂದ ಅಲ್ಲಿಯ ಸಾರ್ವಜನಿಕರಾದ ಹನುಮಂತ ಗೌಡ, ಹಾಗು ಲಕ್ಷ್ಮಿ ಹೊನ್ನಪ್ಪ ನಾಯ್ಕ, ಮಾದೇವಿ ಲಕ್ಷಣ್ ನಾಯ್ಕ ಇವರು ಪಿಡಿಒ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ, ಅದಕ್ಕೆ ಉತ್ತರಿಸಿದ ಅವರು ತಾನು ಬಂದು ನೋಡಿ ನೀರು ಕೊಡಿತ್ತೇನೆ ಅಂತ ಹೇಳಿ ಒಂದು ವಾರವಾದರೂ ಅಲ್ಲಿಗೆ ಹೋಗದೆ ಅವರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಿಲ್ಲ ಎಂದು ಆರೋಪಿಸಿದ್ದಾರೆ,

ಕುಡಿಯುವ ನೀರಿಗಾಗಿ ವಾರಗಟ್ಟಲೆ ಕಾಯಲು ಸಾದ್ಯವೆ, ಅಧಿಕಾರಿಗಳು ಇದ್ದನ್ನು ಅರ್ಥ ಮಾಡಿಕೊಳ್ಳ ಬೇಕಾಗಿದೆ, ಕಾರ್ಯದರ್ಶಿ ಹಾಗೂ ಸಂಬ0ಧ ಪಟ್ಟ ಅಧಿಕಾರಿಗಳಿಗೂ ಮಾಹಿತಿ ನೀಡಿದರು ಯಾವುದೇ ಪ್ರಯೋಜನಕ್ಕೆ ಬಾರದೆ ಇದ್ದಾಗ ಆ ಗ್ರಾಮದ ಮಾಜಿ ಸದಸ್ಯ ಮೋಹನ ಮಂಜಪ್ಪ ನಾಯ್ಕ ಅವರು ತಾವೇ ಖುದ್ದಾಗಿ ಆ ಗ್ರಾಮಕ್ಕೆ ನೀರು ಒದಗಿಸುವಂತೆ ಕೆಲಸ ಮಾಡಿದ್ದಾರೆ.

ಈ ಬಗ್ಗೆ ತಹಶಿಲ್ದಾರ ವಿವೇಕ ಶೆಣ್ವಿ ಅವರಲ್ಲಿ ವಿಚಾರಿಸಲಾಗಿ ಸರಕಾರ ೧೪-೧೫ ಹಣಕಾಸು ಯೋಜನೆ ಅಡಿಯಲ್ಲಿ ನೀರು ಸರಬರಾಜು ಮಾಡಲು ಅವಕಾಶ ಕಲ್ಪಿಸಿತ್ತು ಆದರೆ ಅದು ನಮ್ಮ ತಾಲೂಕಿಗೆ ಇನ್ನು ಮಂಜೂರಿ ಆಗಿಲ್ಲ, ಆದರೆ ಗ್ರಾಮ ಪಂಚಾಯತ ಮಟ್ಟದಲ್ಲಿ ನೀರಿನ ವ್ಯವಸ್ಥೆಯನ್ನು ಪಿಡಿಒ ತಮ್ಮ ಪಂಡ್ ನಿಂದ ವ್ಯವಸ್ಥೆ ಮಾಡಿಕೊಂಡು ಸರಬರಾಜು ಮಾಡಬೇಕು ಅದು ಅವರ ಕರ್ತವ್ಯ ನಾನು ಅದರ ಬಗ್ಗೆ ಇಒ ಮತ್ತು ಪಿಡಿಒ ಜೋತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಇ0ತಹ ಸಂದರ್ಬದಲ್ಲಿ ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸಿದ ಸದಸ್ಯ ಮೋಹನ ಮಂಜಪ್ಪ ನಾಯ್ಕ ಅವರನ್ನು ಅಭಿನಂದಿಸಲೇ ಬೇಕು.
ಇನ್ನು ಅನಂತವಾಡಿ ಗ್ರಾಮಪಂಚಾಯಿತಿ ಸಮಿತಿ ಇಲ್ಲದಿದ್ದರಿಂದ ಇಲ್ಲಿ ಸಮಸ್ಯೆ ಉದ್ಬವವಾಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ,

error: