April 30, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಕೆರವಳ್ಳಿಯಲ್ಲಿ ಯುಗಾದಿ ಯಕ್ಷೋತ್ಸವ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಕೆರವಳ್ಳಿಯಲ್ಲಿ ಯುಗಾದಿ ಯಕ್ಷೋತ್ಸವ ಕಾರ್ಯಕ್ರಮವು ವಿಜೃಂಭಣೆಯಿAದ ನಡೆಯಿತು. ಯಕ್ಷಾಭಿಮಾನಿ ಬಳಗ ಕೆರವಳ್ಳಿ ಇವರ ಸಂಯೋಜನೆಯಲ್ಲಿ ಯುಗಾದಿ ಯಕ್ಷೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹನೀಯರೆಲ್ಲ ಸೇರಿ ಜ್ಯೋತಿ ಬೆಳಗುವ ಮೂಲಕ ಭಕ್ತಿಪೂರ್ವಕವಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜನಪ್ರಿಯ ಯಕ್ಷಗಾನ ಕಲಾವಿದರಾದ ರಾಘವ ಕಾಮನಮಕ್ಕಿ ಮಾತನಾಡಿ “ಕನ್ನಡ ನಾಡಿನಲ್ಲಿ ಕನ್ನಡ ಮಾತೃಭಾಷೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು ಯಕ್ಷಗಾನ ಮತ್ತು ಭಜನೆಯಲ್ಲಿ ಮಾತ್ರಾ. ಈ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಿದಾಗ ಮಾತ್ರಾ ಕನ್ನಡ ಎಲ್ಲರ ಮನೆ ಮನದಲ್ಲಿ ಶಾಶ್ವತವಾಗಿರಲು ಸಾಧ್ಯ” ಎಂದರು.
ಇತ್ತೀಚಿಗೆ ನಮ್ಮನ್ನಗಲಿದ ಯಕ್ಷಗುರು ಗಾನಸಾರಥಿ ಕೃಷ್ಣ ಭಂಡಾರಿ ಗುಣವಂತೆ ಹಾಗೂ ಚಿತ್ರನಟ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರಿಗೆ, ಮೌನಚರಣೆಯ ಮೂಲಕ ಭಾವಪೂರ್ಣ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಬಳಿಕ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಅಭಿಮನ್ಯು ಕಾಳಗ ಹಾಗೂ ಮಧುರಾ ಮಹೇಂದ್ರ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ಆನಂದ ಅಂಕೋಲಾರ ಗಾನ ಸಾರಥ್ಯದಲ್ಲಿ, ಮದ್ದಳೆ ಮಾಂತ್ರಿಕ ನಾಗರಾಜ್ ಭಂಡಾರಿ ಮೃದಂಗ ವಾದನ, ಪ್ರಖ್ಯಾತ ಕಣ್ಣಿ ಮನೆತನದ ಕುಡಿ ಕಾರ್ತಿಕ್ ರ ಕೃಷ್ಣ, ಯಕ್ಷಮಯೂರಿ ಮಂಜು ಕೆರವಳ್ಳಿಯ ರುಚಿಮತಿ ಪ್ರೇಕ್ಷಕರನ್ನು ರಂಜಿಸಿತು. ಯಕ್ಷರಂಗದ ಸಿಡಿಲಮರಿ ಚಂದ್ರಹಾಸ ಗೌಡ ಮಿಂಚಿನ ಅಭಿಮನ್ಯುವಾಗಿ ಸಂಭಾಷಣೆಯೊAದರಲ್ಲಿ, ದೇಶ ಕಾಯುವ ವೀರ ಯೋಧರ ಕುರಿತಾಗಿ ಆಡಿರುವ ಮಾತುಗಳಿಗೆ, ಪೂರಕವಾಗಿ ಪ್ರೇಕ್ಷಕರು ಚಪ್ಪಾಳೆಯ ಮೂಲಕ ದೇಶಪ್ರೇಮವನ್ನು ವ್ಯಕ್ತಪಡಿಸಿದರು. ಇನ್ನು ಹಾಸ್ಯದಲ್ಲಿ ನಾಗೇಂದ್ರ ಮೂರೂರು, ದ್ರೋಣಾಚಾರ್ಯರಾಗಿ ನಾಗೇಶ್ ಕುಳಿಮನೆ, ಸುಭದ್ರೆಯಾಗಿ ಮಾರುತಿ ಭೈಲಗದ್ದೆ, ಕಂಸನಾಗಿ ಬಳ್ಕೂರ ಹನ್ಮಂತ ನಾಯ್ಕ್ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದರು.
ಯುಗಾದಿ ಯಕ್ಷೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ, ಯಕ್ಷಾಭಿಮಾನಿ ಬಳಗದ ಸದಸ್ಯ ಸುಬ್ರಹ್ಮಣ್ಯ ಗೌಡ ಧನ್ಯವಾದ ಸಮರ್ಪಿಸಿದರು.

error: