
ಕುಮಟಾ ತಾಲೂಕಿನ ಮೂರೂರು-ಕಲ್ಲಬ್ಬೆ ರಸ್ತೆ ಕಾಮಗಾರಿಯು ವಿಳಂಬ ಮತ್ತು ಅವೈಜ್ಞಾನಿಕವಾಗಿ ನಡೆಸುತ್ತಿರುವುದನ್ನು ವಿರೋಧಿಸಿ, ಅಲ್ಲಿನ ನಿವಾಸಿಗಳು ಸಹಾಯಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದರು.
ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆಯ ಎರಡು ಬದಿಗಳಲ್ಲಿ ಸುಮಾರು ೯ ಮೀಟರ್‌ಗಳಷ್ಟು ಉದ್ದಕ್ಕೆ ಕಂದಕವನ್ನು ತೆಗೆದದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇದರಿಂದ ಅಪಘಾತಗಳು ಉಂಟಾಗಿರುವ ಉದಾಹರಣೆಯೂ ಇದೆ. ಆಲದಕಟ್ಟೆಯ ಎರಡು ಬದಿಗಳಲ್ಲಿ ಒಂದು ಹಂತದ ಡಾಂಬರೀಕರಣ ಮಾಡಿದ್ದು, ಇದು ಉಬ್ಬು ತಗ್ಗುಗಳಿಂದ ಕೂಡಿದೆ. ರಸ್ತೆಗೆ ಇನ್ನೊಂದು ಪದರ ಡಾಂಬರೀಕರಣವಾಗಬೇಕು ಜತೆಗೆ ಕಾಗಾಲ ಮಾನೀರ ಬಸ್ ನಿಲ್ದಾಣದ ಸಮೀಪ ರಸ್ತೆಯ ಎರಡೂ ಬದಿಗಳಲ್ಲಿ ಕಳಪೆ ಜೆಲ್ಲಿ ಮತ್ತು ಬ್ರಿಟ್ಸಗಳನ್ನು ಹಾಕಲಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ತೆಗೆದು ಅಂದಾಜು ಪಟ್ಟಿಯಲ್ಲಿರುವಂತೆ ಉತ್ತಮ ಗುಣಮಟ್ಟದ ಜೆಲ್ಲಿಯನ್ನು ಹಾಕಬೇಕು. ೫ ಕಿ.ಮೀಯಿಂದ ೬ ಕಿ.ಮೀಯವರೆಗೆ ಕೆರೆಘಜನಿ ಘಟ್ಟದಲ್ಲಿ ತೀವ್ರವಾದ ಅನೇಕ ತಿರುವುಗಳಿದ್ದು, ಘಟ್ಟದ ಇಳಿಜಾರಿನ ಪ್ರದೇಶದಲ್ಲಿ ಹೊಸದಾಗಿ ರಸ್ತೆ ನಿರ್ಮಿಸುವುದು ಸೂಕ್ತ. ಅಲ್ಲದೇ, ಕೆರೆಘಜನಿ ಬಸ್ ತಂಗುದಾಣದಿAದ ಮೂರೂರು ಬಸ್ ನಿಲ್ದಾಣದವರೆಗೆ ಹೊಸ ರಸ್ತೆ ನಿರ್ಮಾಣಮಾಡಬೇಕೆಂದು ಆಗ್ರಹಿಸಲಾಗಿದೆ.
ಮನವಿ ಸಲ್ಲಿಸಿ, ಸ್ಥಳೀಯ ನಿವಾಸಿ ಟಿ.ಪಿ.ಹೆಗಡೆ ಮಾತನಾಡಿ, ಮೂರೂರು ರಸ್ತೆ ಕಾಮಗಾರಿ ಆರಂಭವಾಗಿ ೨ ವರ್ಷವಾದರೂ ಮುಗಿದಿಲ್ಲ. ಕಳೆದ ವರ್ಷ ಕೊವಿಡ್ ಕಾರಣದಿಂದ ವಿಳಂಬವಾಯಿತು ಎಂದು ಸುಮ್ಮನಾಗಿದ್ದೇವು. ಈ ವರ್ಷ ಕಾಟಚಾರಕ್ಕೆ ಕಾಮಗಾರಿ ಆರಂಭಿಸಿದ್ದಾರೆ. ೭.೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯು ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದೆ. ಜನಪ್ರತಿನಿಧಿಗಳ ನಿರ್ಲಕ್ಷöದಿಂದ ಕಳಪೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಕುಮಟಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕುಮಟಾ ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಈ ವಿಷಯದ ಕುರಿತು ಶಾಸಕ ದಿನಕರ ಶೆಟ್ಟಿ ಚರ್ಚೆಗೆ ಆಗಮಿಸಿದರೆ ನಾನು ಖಂಡಿತ ಚರ್ಚೆಗೆ ಸಿದ್ಧನಿದ್ದೇನೆ. ಮೂರೂರು-ಕಲ್ಲಬ್ಬೆ ರಸ್ತೆಯು ಗುಣಮಟ್ಟದಿಂದ ನಡೆಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ಸ್ಥಳೀಯ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು. ಇಂತಹ ರಸ್ತೆ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ಶಾಸಕರು ಖುದ್ದಾಗಿ ನಿಂತು ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.
ಕಲ್ಲಬ್ಬೆ ಗ್ರಾ.ಪಂ ಅಧ್ಯಕ್ಷ ಗಿರಿಯಾ ಗೌಡ, ಮೂರೂರು ಗ್ರಾ.ಪಂ ಅಧ್ಯಕ್ಷ ರಾಘು ನಾಯ್ಕ, ನಿವೃತ್ತ ಇಂಜಿನಿಯರ್ ರಾಮಚಂದ್ರ ಭಟ್ಟ, ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಆರ್.ವಿ ಹೆಗಡೆ, ವಿಜ್ಞಾನಿ ಡಾ.ಶ್ರೀಕಾಂತ ಹೆಗಡೆ, ಗ್ರಾ.ಪಂ ಸದಸ್ಯ ಆರ್.ವಿ.ಹೆಗಡೆ, ಹರ್ಷ ಹೆಗಡೆ, ನಿವೃತ್ತ ಪ್ರಾಂಶುಪಾಲ ಮಹೇಶ ಅಡಕೋಳಿ ಸೇರಿದಂತೆ ಮತ್ತಿತರರು ಇದ್ದರು.
More Stories
ಶಾಲೆಗೆ ತೆರಳಿದ್ದ ವೇಳೆ ವಿದ್ಯಾರ್ಥಿನಿ ನಾಪತ್ತೆ: ಪೋಷಕರಿಂದ ದೂರು
ನಾಯಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಯುವಕ ಸಾವು
ಆನಂದ ಅಸ್ನೋಟಿಕರ್ ವಿರುದ್ಧ ಮುಗಿಬಿದ್ದ ಭಟ್ಕಳ ಬಿಜೆಪಿ, ಮಾನಸಿಕ ಅಸ್ವಸ್ಥ ಎಂದು ಜರಿದ ಶಾಸಕ ಸುನೀಲ್ ನಾಯ್ಕ